ಮಾದಕ ಜಾಲ ಮಟ್ಟಹಾಕಲು ಪೊಲೀಸ್ ಇಲಾಖೆ ಬದ್ಧ

IMG-20250309-WA0169
Published on

* ಎಸ್‌ಪಿ ಆರ್. ಶ್ರೀನಿವಾಸ್ ಗೌಡ ಹೇಳಿಕೆ

* ಮಾದಕ ವಸ್ತು ಮುಕ್ತ ಕರ್ನಾಟಕ ಜಾಗೃತಿ ವ್ಯಾರಥಾನ್ ಓಟಕ್ಕೆ ಚಾಲನೆ

ರಾಮನಗರ

ಮಾದಕ ವಸ್ತು ವಾರಾಟ ಜಾಲವನ್ನು ಮಟ್ಟಹಾಕಲು ಪೊಲೀಸರು ಬದ್ಧರಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ ತಿಳಿಸಿದರು.

ನಶೆ ಮುಕ್ತ ಕರ್ನಾಟಕ, ಫಿಟ್‌ನೆಸ್ ಫಾರ್ ಆಲ್ ಹಾಗೂ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷ ವಾಕ್ಯದಡಿ ರಾಮನಗರ ಪೊಲೀಸರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಮುಂಜಾನೆ ಹಮ್ಮಿಕೊಂಡಿದ್ದ ವಾದಕ ವಸ್ತು ಮುಕ್ತ ಕರ್ನಾಟಕ ಜಾಗೃತಿ ವ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಇಂದು ಮಾದಕದ್ರವ್ಯ ವ್ಯಸನಿಗಳ ಮೇಲೆ ಹೆಚ್ಚಾಗಿ ಪ್ರಕರಣ ದಾಖಲು ವಾಡಿಕೊಳ್ಳುತ್ತಿಲ್ಲ. ಬದಲಾಗಿ ಅವರನ್ನು ರೋಗಿಗಳನ್ನಾಗಿ ಗುರುತಿಸಿ ದುಶ್ಚಟದಿಂದ ಮುಕ್ತರಾಗಲು ಪೊಲೀಸ್ ಇಲಾಖೆ ನೆರವು ನೀಡುತ್ತಿದೆ. ನಶೆ ಮುಕ್ತ ಕರ್ನಾಟಕ ವಾಡಲು ಎಲ್ಲ ರೀತಿಯ ಮಾದಕ ವಸ್ತು ಜಾಲವನ್ನು ಮಟ್ಟ ಹಾಕುತ್ತೇವೆ. ಡ್ರಗ್ಸ್ ದಂಧೆಗೆ ಬ್ರೇಕ್ ಹಾಕಲು ಈ ವರ್ಷ ಅತ್ಯಧಿಕ ಪ್ರಕರಣ ದಾಖಲಿಸಲು ಚಿಂತಿಸಲಾಗಿದ್ದು, ವಾದಕವಸ್ತು ವಾರಾಟದ ಜಾಲವನ್ನು ಪೊಲೀಸ್ ಇಲಾಖೆ ಮಟ್ಟ ಹಾಕಲಿದೆ ಎಂದು ಹೇಳಿದರು.

ಪ್ರತಿಯೊಬ್ಬರಿಗೂ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ದೈಹಿಕ ಆರೋಗ್ಯಕ್ಕೆ ನಿಯಮಿತ ಓಟ, ವ್ಯಾಯಾಮ ಅಗತ್ಯ ಎಂದು ಹೇಳಿದರು. ಸವಾಜದಲ್ಲಿ ಪ್ರತಿಯೊಂದಕ್ಕೂ ಪೊಲೀಸರು ಬೇಕು. ಆದರೆ, ಪೊಲೀಸರ ಬಗ್ಗೆ ಹಲವು ರೀತಿಯ ಅಭಿಪ್ರಾಯ ಜನಸಾವಾನ್ಯರಲ್ಲಿ ಇರುತ್ತದೆ. ಪೊಲೀಸ್ ಠಾಣೆ ಮೆಟ್ಟಿಲು ಹತ್ತಲು ಇಂದಿಗೂ ಎಷ್ಟೋ ಮಂದಿ ಭಯಪಡುತ್ತಾರಲ್ಲದೇ, ಕಸಿವಿಸಿ ಇರುತ್ತದೆ. ಇಂತಹ ಮನೋಭಾವನೆ ಹೋಗಲಾಡಿಸುವ ಜತೆಗೆ ನಮ್ಮ ಪೊಲೀಸರು ನಮ್ಮ ಹೆಮ್ಮೆ ಎಂಬ ಭಾವನೆ ಮೂಡಿಸಲು ವ್ಯಾರಥಾನ್ ಓಟ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕ್ರೀಡೆಗಳು ಯಾವಾಗಲೂ ಮಾನವ ಜೀವನದ ಅತ್ಯಗತ್ಯ ಭಾಗವಾಗಿದೆ. ನಾನು ಕ್ರೀಡಾಪಟುವಾಗಿದ್ದು, ವಾರಾಂತ್ಯದಲ್ಲಿ ಕ್ರಿಕೆಟ್ ಆಟವನ್ನು ಅಭ್ಯಸಿಸುತ್ತೇನೆ. ಪ್ರತಿ ವ್ಯಕ್ತಿಯೂ ಯಾವುದಾದರೂ ಕ್ರೀಡೆಯನ್ನು ರೂಢಿಸಿಕೊಳ್ಳಬೇಕು. ಕ್ರೀಡೆ ಮನುಷ್ಯನ ದೈಹಿಕ ಸಾಮರ್ಥ್ಯದ ಜತೆಗೆ ವಾನಸಿಕವಾಗಿ ಬಲಶಾಲಿಗೊಳಿಸುತ್ತದೆ. ಇಂದು ಯುವಸಮೂಹ ವಾದಕವಸ್ತುಗಳ ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಅವರು ಕೆಟ್ಟವರಲ್ಲ, ಅಪರಾಧಿಗಳೂ ಅಲ್ಲ. ವಾದಕ ವ್ಯಸನಕ್ಕೆ ಬಲಿಯಾದವರನ್ನು ಸರಿದಾರಿಗೆ ತರಲು ಸ್ನೇಹಿತರು ಮತ್ತು ಪಾಲಕರು ಮುತುವರ್ಜಿವಹಿಸಬೇಕಿದೆ ಎಂದು ತಿಳಿಸಿದರು.

ಜಿಲ್ಲಾ ಕ್ರೀಡಾಂಗಣದಿಂದ ಆರಂಭವಾದ 5 ಕಿ. ಮೀ ವ್ಯಾರಥಾನ್ ಓಟ ಹಳೆ ಬೆಂಗಳೂರು ಮೈಸೂರು ರಸ್ತೆ, ಐಜೂರು ವತ್ತ, ಕೆಂಗಲ್ ಹನುಮಂತಯ್ಯ ವತ್ತದ ರೈಲ್ವೆ ಸೇಷ್ಟನ್ ರಸ್ತೆಯಲ್ಲಿ ಸಾಗಿ ಎಂಜಿ ರಸ್ತೆ, ಕಾಮಣ್ಣನಗುಡಿ ಸರ್ಕಲ್, ವಾಟರ್ ಟ್ಯಾಂಕ್ ಸರ್ಕಲ್ ಮೂಲಕ ಜಿಲ್ಲಾ ಕ್ರೀಡಾಂಗಣ ತಲುಪಿತು.

ಜಿಲ್ಲಾ ಕ್ರೀಡಾಂಗಣದಿಂದ ಪ್ರಾರಂಭಗೊಂಡ 10 ಕಿಲೋಮೀಟರ್ ವ್ಯಾರಥಾನ್ ಓಟ ಹಳೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಮನೆ ತಲುಪಿ ಬಳಿಕ ಹಳೆ ಹೆದ್ದಾರಿ ಮೂಲಕ ಕ್ರೀಡಾಂಗಣಕ್ಕೆ ಮರಳಿತು. ವ್ಯಾರಥಾನ್ ಸಾಗುವ ವಾರ್ಗಗಳಲ್ಲಿ ಪೊಲೀಸರು ವಾರ್ಗದರ್ಶನ ವಾಡುವ ಜತೆಗೆ ಕುಡಿಯುವ ನೀರು, ಗ್ಲುಕೋಸ್ ವ್ಯವಸ್ಥೆ ಕಲ್ಪಿಸಿದ್ದರು. ಜಿಲ್ಲಾ ಕ್ರೀಡಾಂಗಣದಲ್ಲಿ ವ್ಯಾರಥಾನ್ ಓಟಗಾರರಿಗೆ ಉಪಾಹಾರದ ವ್ಯವಸ್ಥೆ ವಾಡಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ಸಹ 5 ಕಿ. ಮೀ ವ್ಯಾರಥಾನ್ ಪಾಲ್ಗೊಂಡು ಓಟಗಾರರಿಗೆ ಉತ್ತೇಜನ ನೀಡಿದರು.

ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಟಿ.ವಿ.ಸುರೇಶ್, ರಾಮಚಂದ್ರಯ್ಯ ಡಿವೈಎಸ್‌ಪಿ, ದಿನಕರ್ ಶೆಟ್ಟಿ, ಕೆ.ಸಿ.ಗಿರಿ, ಪ್ರವೀಣ್, ರು, ಪೊಲೀಸ್ ವೃತ್ತ ನಿರೀಕ್ಷಕರಾದ ಕೃಷ್ಣ, ರಮೇಶ್, ವಸಂತ್, ಶೋಭಾ ಪೊಲೀಸ್ ಉಪ ನಿರೀಕ್ಷಕರಾದ ಅರ್ಜುನ್, ವೆಂಕಟೇಶ್, ಟಿ.ಟಿ.ಕೃಷ್ಣ , ಆಕಾಶ್, ಮಂಜುನಾಥ್ ಹೂಗಾರ್, ಮೋಹನ್ ಸೇರಿ ಕೆಂಗಲ್ ಹನುಮಂತಯ್ಯ ಸ್ಪೋರ್ಟ್ಸ್ ಕ್ಲಬ್‌ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net