ಮಳೆ ನಡುವೆಯೇ ಕಾನ್‌ಸ್ಟೆಬಲ್ ಹುದ್ದೆಗೆ ಪರೀಕ್ಷೆ

UDP_police Exam
ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಮಳೆಯ ನಡುವೆಯೇ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯ ಅಹರ್ತಾ ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳು.
Published on

ಉಡುಪಿ: ರೆಡ್ ಅಲರ್ಟ್ ಮಳೆಯ ನಡುವೆಯೇ ಅಜ್ಜರಕಾಡು ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಯ ಅಹರ್ತಾ ಪರೀಕ್ಷೆ ನಡೆಯಿತು.

ಮಳೆಯಲ್ಲೇ ದೈಹಿಕ ಅರ್ಹತೆ ಪರೀಕ್ಷೆ

ಮಳೆ ನೀರು ನಿಂತಿದ್ದ ಕ್ರೀಡಾಂಗಣದಲ್ಲಿಯೇ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದರೆ, ಅಧಿಕಾರಿಗಳು ಮಳೆಯಲ್ಲೇ ಕೊಡೆ ಹಿಡಿದು ಪರೀಕ್ಷೆ ನಡೆಸಿದರು.

ದೈಹಿಕ ಅರ್ಹತೆಯಲ್ಲಿ 97 ಅಭ್ಯರ್ಥಿಗಳು ಆಯ್ಕೆ

2022-23ನೇ ಸಾಲಿನ ಸಶಸ ಪೊಲೀಸ್ ಕಾನ್‌ಸ್ಟೆಬಲ್‌ನ 3,064 ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆದಿತ್ತು. 200 ಅರ್ಹ ಅಭ್ಯರ್ಥಿಗಳಿಗೆ ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಪರೀಕ್ಷೆ ಆಯೋಜಿಸಲಾಗಿತ್ತು. ಆಗಾಗ ಸುರಿದ ಮಳೆಯ ನಡುವೆಯೇ 177 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಭಾರಿ ಮಳೆ ಹಾಗೂ ಇನ್ನಿತರ ಕಾರಣಗಳಿಂದ 23 ಅಭ್ಯರ್ಥಿಗಳು ಗೈರಾಗಿದ್ದರು. 177 ಅಭ್ಯರ್ಥಿಗಳಲ್ಲಿ 97 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು, 80 ಮಂದಿ ಅನುತ್ತೀರ್ಣರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net