ಬಾವಿಯಲ್ಲಿ ಮುಳುಗಿ ಪೊಲೀಸ್ ಕಾನ್ ಸ್ಟೇಬಲ್ ಸಾವು

IMG-20231113-WA0241.jpg
Published on

ಮಾಗಡಿ. ಈಜಾಡಲು ತೆರಳಿದ ಪೋಲಿಸ್ ನೀರುಪಾಲಾದ ಘಟನೆ ಕುದೂರು ಪೋಲೀಸ್ ಠಾಣೆ ವ್ಯಾಪ್ತಿಯಯ ನಡೆದಿದೆ.


ತಾಲೂಕಿನ ಹೇಮಾಪುರ ಗ್ರಾಮದ ಸಿಆರ್ ಪೋಲಿಸ್ ದೇವರಾಜು (42) ಬಾವಿಯಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಯಾಗಿದ್ದು, ನೆಲಮಂಗಲ ಪಟ್ಟಣದ ವಾಸ ವಾಗಿದ್ದರು.

ದೇವರಾಜು ಬೆಂಗಳೂರಿನ ಸಿಆರ್ ಪೋಲೀಸ್ ಹಾಗಿ ಕಾರ್ಯನಿರ್ವಹಿಸುತ್ತಿದ್ದು ತಮ್ಮ ಗ್ರಾಮ ಹೇಮಾಪುರ ಗ್ರಾಮಕ್ಕೆ ಸ್ನೇಹಿತರೊಂದಿಗೆ ಬಂದು ತಳವರ ಪಾಳ್ಯದ ಸಂಬಂದಿಕರ ಬಾವಿಯಲ್ಲಿ ಈಜಾಡುತ್ತಿದ್ದ ವೇಳೆ ಮುಳುಗಿ ಸಾವನ್ನಪಿದ್ದಾರೆ.


ಅಗ್ನಿಶಾಮಕ ದಳದ ಸಿಬ್ಬಂದಿ ಬೇಟಿ ನೀಡಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net