ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ತಾಲೂಕಿನ ಮಲ್ಲಿಗುರ್ಕಿಯಲ್ಲಿ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ತೆಗೆದು ದಾರಿ ಬಿಡುವ ವಿಚಾರಕ್ಕೆ ಗಲಾಟೆಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬೆಂಗಳೂರಿನ ಹಲಸೂರು ಗೇಟ್ ಪೊಲೀಸ್ ಠಾಣೆ ಪೇದೆ, ತಾಲೂಕಿನ ಮಲ್ಲಿಗುರ್ಕಿಯ ಶಶಿಕುಮಾರ್ ಹಾಗೂ ಅದೇ ಗ್ರಾಮದ ಸರಕು ಸಾಗಾಣೆ ವಾಹನ ಚಾಲಕ ವಿಶ್ವನಾಥ್ ನಡುವೆ ದಾರಿ ಬಿಡುವ ವಿಚಾರದಲ್ಲಿ ಗಲಾಟೆಯಾಗಿದೆ. ಇಬ್ಬರ ಮನೆಗಳು ಒಂದೇ ಬೀದಿಯಲ್ಲಿದ್ದು, ಪೊಲೀಸ್ ನಾಮಫಲಕ ಅಳವಡಿಸಿರುವ ಕಾರನ್ನು ಶಶಿಕುಮಾರ್ ಮನೆ ಮುಂಭಾಗದ ಕಿರಿದಾದ ರಸ್ತೆಯಲ್ಲಿ ನಿಲ್ಲಿಸಿದ್ದರು. ಆ ಕಾರು ತೆಗೆಯುವಂತೆ ಚಾಲಕ ವಿಶ್ವನಾಥ್ ಮನವಿ ಮಾಡಿದ್ದಾರೆ. ಈ ವೇಳೆ ಗಲಾಟೆಯಾಗಿ ದೊಣೆ್ಣೆ, ಕಬ್ಬಿಣದ ರಾಡ್ನಿಂದ ಶಶಿಕುಮಾರ್ ಚಾಲಕನ ತಲೆಗೆ ಹೊಡೆದಿದ್ದಾರೆ ಎನ್ನಲಾಗಿದೆ. ವಿಶ್ವನಾಥ್ ತಲೆಗೆ ಗಾಯವಾಗಿದ್ದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬಾಗೇಪಲ್ಲಿ ಠಾಣೆಯಲ್ಲಿ ಶನಿವಾರ ಪ್ರಕರಣ ದಾಖಲಾಗಿದೆ.ಪೊಲೀಸ್ ಪೇದೆ ತಂದೆಯಿಂದ ಪ್ರತಿ ದೂರ ದಾಖಲಾಗಿದೆ. ದೂರು ಸ್ವೀಕರಿಸಿದ ಪೊಲೀಸ್ ಇನ್ಸ್ಪೆಕ್ಟರ್ ಪ್ರಶಾಂತ್ ವರ್ಣಿ ನೇತೃತ್ವದ ತಂಡ ಗ್ರಾಮಕ್ಕೆ ತೆರಳಿ ಸ್ಥಳಿಯರ ವಿಚಾರಣೆ ನಡೆಸಿ ಮಾಹಿತಿ ಪಡೆಯಿತು.