

ಕಾರವಾರ: ಜಿಲ್ಲೆಯಲ್ಲಿ ಇತ್ತೀಚೆಗೆ ಪೊಲೀಸರ ವಿರುದ್ಧ ದೂರುಗಳು ಹೆಚ್ಚುತ್ತಿವೆ. ಆದರೆ, ಅಂಥ ಆರೋಪಗಳ ಬಗ್ಗೆ ತನಿಖೆ ನಡೆಸಬೇಕಾದ ಪೊಲೀಸ್ ದೂರು ಪ್ರಾಧಿಕಾರ ನಿಷ್ಕ್ರಿಯವಾಗಿದೆ.
ರಾಜ್ಯ ಹಾಗೂ ಪ್ರತಿ ಜಿಲ್ಲೆಯಲ್ಲಿ ಪೊಲೀಸ್ ದೂರು ಪ್ರಾಧಿಕಾರಗಳನ್ನು 2015 ರಲ್ಲೇ ರಚಿಸಲಾಗಿದೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ದುರ್ನಡತೆ, ಅಧಿಕಾರ ದುರುಪಯೋಗ, ಪೊಲೀಸ್ ಅಭಿರಕ್ಷೆಯಲ್ಲಿ ಸಾವು, ಅತ್ಯಾಚಾರ ಮುಂತಾದ ಘಟನೆಗಳು ನಡೆದಲ್ಲಿ ಅದನ್ನು ಪೊಲೀಸ್ ದೂರು ಪ್ರಾಧಿಕಾರ ವಿಚಾರಣೆ ನಡೆಸಲಿದೆ. ಪೊಲೀಸ್ ಕಾನ್ಸ್ಟೇಬಲ್‌ನಿಂದ ಹಿಡಿದು, ಡಿವೈಎಸ್‌ಪಿ ಗ್ರೇಡ್ ಅಽಕಾರಿಗಳ ಬಗ್ಗೆ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದು. ಅದಕ್ಕೂ ಮೇಲಿನ ಅಧಿಕಾರಿಗಳ ಬಗ್ಗೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ನಿವೃತ್ತ ನ್ಯಾಯಮೂರ್ತಿಯೊಬ್ಬರು ಅಧ್ಯಕ್ಷರಾಗಿರುತ್ತಾರೆ.
ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ದೂರು ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ. ಎಸ್‌ಪಿ ಅದರ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಅದನ್ನು ಹೊರತುಪಡಿಸಿ ರಾಜ್ಯ ನಾಕರಿಕ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ಅಧಿಕಾರಿಯೊಬ್ಬರನ್ನು ಹಾಗೂ ಸಾರ್ವಜನಿಕ ವಲಯದಿಂದ ಒಬ್ಬರನ್ನು ಅಧಿಕಾರೇತರ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ಕಾಲಕಾಲಕ್ಕೆ ಈ ಪ್ರಾಧಿಕಾರವು ಸಭೆ ಮಾಡಿ, ದೂರುಗಳನ್ನು ವಿಚಾರಣೆ ಮಾಡಬೇಕಿದ್ದು, ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಅಧಿಕಾರಿ, ಸಿಬ್ಬಂದಿ ಮೇಲೆ ಕ್ರಮಕ್ಕೆ ಶಿಫಾರಸು ಮಾಡಬಹುದಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ದೂರು ಪ್ರಾಽಕಾರ ಇದ್ದ ಬಗ್ಗೆಯೇ ಮಾಹಿತಿ ಇಲ್ಲ. ಅಽಕಾರೇತರ ಸದಸ್ಯರು ಎಂಬ ಮಾಹಿತಿಯೂ ಇಲ್ಲ. ಜಿಲ್ಲಾ ಪೊಲೀಸ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ಒಂದೇ ಒಂದು ಮಾಹಿತಿ ಇಲ್ಲ. ಎಸ್‌ಪಿ ಕಚೇರಿಯಲ್ಲಿಯೂ ಯಾವುದೇ ಕೊಠಡಿ ಅದಕ್ಕಾಗಿ ಮೀಸಲಿಟ್ಟಿಲ್ಲ. ಒಂದು ಬೋರ್ಡ್ ಸಹ ಇಲ್ಲ. ಯಾರಿಗೆ ದೂರು ಸಲ್ಲಿಸಬೇಕು. ಹೇಗೆ ದೂರು ಸಲ್ಲಿಸಬೇಕು ಎಂದು ಜನರಿಗೆ ಪೊಲೀಸ್ ಇಲಾಖೆ ಮಾಹಿತಿ ನೀಡಬೇಕಿದೆ. ಆದರೆ, ಇಲಾಖೆ ಅದನ್ನು ಉದ್ದೇಶಪೂರ್ವಕವಾಗಿಯೇ ಮುಚ್ಚಿಟ್ಟಿದೆ.
ಇತ್ತೀಚೆಗೆ ಪೊಲೀಸರ ಮೇಲೆ ದೌರ್ಜನ್ಯದ ಆರೊಪಗಳು ಹೆಚ್ಚುತ್ತಿವೆ. ಪೊಲೀಸ್ ಅಽಕಾರಿಗಳ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಒಂದೇ ವರ್ಷ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರೂ ವಿಡಿಯೋ ಮಾಡಿದ ಮೃತಪಟ್ಟಿದ್ದು, ಸಾಕ್ಷ್ಯಗಳಿಗೆ. ಇದು ಗಂಭೀರ ಪ್ರಕರಣಗಳಾಗಿದ್ದರೆ, ಪ್ರತಿ ತಿಂಗಳೂ ಇಂಥ ಕನಿಷ್ಠ ನಾಲ್ಕಾರು ಆರೋಪಗಳು ಪೊಲೀಸ್ ಅಽಕಾರಿಗಳ ವಿರುದ್ಧ ಬರುತ್ತಲೇ ಇರುತ್ತವೆ. ಆದರೆ, ಅದರ ಬಗ್ಗೆ ಹಿರಿಯ ಅಽಕಾರಿಗಳಿಂದಲೂ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬ ದೂರಿದೆ.