ಸುದ್ದಿಯ ಶೀರ್ಷಿಕೆ ತಿರುಚಿದ ಕಿಡಿಗೇಡಿಗಳ ವಿರುದ್ಧ ಪೊಲೀಸರಿಗೆ ದೂರು

Feature
Published on

ಬೆಂಗಳೂರು: ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ಯ ವೆಬ್‌ಸೈಟ್ ‘ವಿಜಯವಾಣಿ ಡಾಟ್‌ನೆಟ್’ನಲ್ಲಿ ಪ್ರಕಟಿಸಲಾಗಿದ್ದ ಸುದ್ದಿಯನ್ನು ತಿರುಚಿ ಜಾಲತಾಣಗಳಲ್ಲಿ ಹರಿಯಬಿಟ್ಟ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಂಕರಪುರ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಂ ಪೊಲೀಸರಿಗೆ ದೂರು ಕೊಡಲಾಗಿದೆ.

ಮಂಗಳವಾರ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಕುರಿತು ಸುದ್ದಿಗಳನ್ನು ‘ವಿಜಯವಾಣಿ ಡಾಟ್‌ನೆಟ್’ನಲ್ಲಿ ಪ್ರಕಟಿಸಲಾಗಿತ್ತು. ವಿವಿಧ ಸುದ್ದಿಗಳ ಪೈಕಿ ‘ಸೂರಜ್ ರೇವಣ್ಣಗೆ ಭರ್ಜರಿ ಗೆಲುವು: ಮಾಜಿ ಪ್ರಧಾನಿ ದೇವೇಗೌಡರ 3ನೇ ಕುಡಿ ವಿಧಾನಸೌಧ ಪ್ರವೇಶ’ ಎಂಬ ಶೀರ್ಷಿಕೆಯುಳ್ಳ ಸುದ್ದಿಯೂ ಅದರಲ್ಲಿತ್ತು.

ಈ ಸುದ್ದಿಯ ಸ್ಕ್ರೀನ್ ಶಾಟ್ ತೆಗೆದ ಕಿಡಿಗೇಡಿಗಳು, ಕುಡಿ ಎಂಬ ಪದವನ್ನು ವಿಕೃತಗೊಳಿಸಿ ತಿರುಚಿ, ಅದನ್ನು ‘ವಿಜಯವಾಣಿ’ ಹೆಸರಿನ ಸಮೇತ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈ ಕುಕೃತ್ಯ ಎಸಗಿದವರನ್ನು ಕೂಡಲೇ ಪತ್ತೆ ಮಾಡಿ ಸೂಕ್ತ ರೀತಿಯ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net