ಪೊಲೀಸರ ಮೇಲೆ ಮಚ್ಚು, ದೊಣ್ಣೆಗಳಿಂದ ದಾಳಿ: ಉತ್ತರ ಪ್ರದೇಶದ 8 ಡಕಾಯಿತರ ಮೇಲೆ ಫೈರಿಂಗ್​! Dacoits

Dacoits
Published on

Dacoits : ಹೊನ್ನಾಳಿ ತಾಲೂಕು ಅರಬಗಟ್ಟ ಕ್ರಾಸ್ ಬಳಿ ತಡರಾತ್ರಿ 2.30 ರ ಸುಮಾರಿಗೆ ಡಕಾಯಿತರನ್ನು ಹಿಡಿಯಲು ಬೆನ್ನುಹತ್ತಿದ ಪೊಲೀಸರ ಮೇಲೆ ಆರೋಪಿಗಳು ಮಚ್ಚು, ದೊಣ್ಣೆಗಳಿಂದ ದಾಳಿ ನಡೆಸಿದ್ದು, ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಈ ಘಟನೆಯಲ್ಲಿ ನಾಲ್ವರು ಡಕಾಯಿತರು ಗಾಯಗೊಂಡಿದ್ದು, ಅವರನ್ನು ವಶಕ್ಕೆ ಪಡೆದು ನ್ಯಾಮತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ನಾಲ್ಕು ಜನರು ಕಾರಿನಲ್ಲಿ ಪರಾರಿಯಾಗಿದ್ದಾರೆ. ಓರ್ವ ಪೊಲೀಸ್​ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ಆರೋಪಿಗಳು ಬ್ಯಾಂಕ್ ದರೋಡೆಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಖಚಿತ ಮಾಹಿತಿ ಮೇರೆಗೆ ಅರಬಗಟ್ಡ ಬಳಿ ಪೊಲೀಸರ ದಾಳಿ ನಡೆಸಿದರು. ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ, ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆ ಮಾಡಲು ಡಕಾಯಿತರು ಮುಂದಾದರು. ಈ ವೇಳೆ ಪೊಲೀಸರಿಂದ ಫೈರಿಂಗ್ ನಡೆದಿದೆ.

ಆರೋಪಿಗಳು ಡಕಾಯಿತಿ ಮಾಡಲು ಹೊಂಚು ಹಾಕಿದ್ದರು. ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದುದನ್ನು ಗಮನಿಸಿದ ಪೊಲೀಸರು ಅವರನ್ನು ಬೆನ್ನುಹತ್ತಿದಾಗ ಈ ಘಟನೆ ನಡೆದಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net