

Anasuya Bharadwaj : ಟಾಲಿವುಡ್ನ ಜನಪ್ರಿಯ ನಟಿ ಮತ್ತು ನಿರೂಪಕಿ ಅನಸೂಯಾ ಭಾರದ್ವಾಜ್ ಬಗ್ಗೆ ಬಹುತೇಕರಿಗೆ ತಿಳಿದೇ ಇರುತ್ತದೆ. ನ್ಯೂಸ್ ರೀಡರ್ ಆಗಿ ವೃತ್ತಿ ಜೀವನ ಆರಂಭಿಸಿದ ಅನಸೂಯಾ ನಂತರ ಆ್ಯಂಕರ್ ಆಗಿ, ನಾಯಕಿಯಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಮೂಲಕ ಸೆಲೆಬ್ರಿಟಿಯಾದರು. ಅದರಲ್ಲೂ ತಮ್ಮ ಸೌಂದರ್ಯ ಮತ್ತು ಅಭಿನಯದಿಂದಲೇ ಎಲ್ಲರನ್ನು ತಮ್ಮತ್ತ ಸೆಳೆದಿದ್ದಾರೆ. ಆದರೆ, ಅನಸೂಯಾ ಅವರಿಗೆ ವಿವಾದಗಳು ಹೊರತಲ್ಲ. ಅದರಲ್ಲೂ ತನ್ನ ಹಾಟ್ ಡ್ರೆಸ್ಗಳಿಂದಲೇ ಆಗಾಗ ಟ್ರೋಲ್ಗೆ ಒಳಗಾಗುತ್ತಕೇ ಇರುತ್ತಾರೆ. ಆದರೆ, ಇದ್ಯಾವುದಕ್ಕೂ ಅವರು ಕ್ಯಾರೆ ಎನ್ನುವುದಿಲ್ಲ.
ಅಂದಹಾಗೆ ಆಂಟಿ ಎಂಬ ಪದ ಅನಸೂಯಾ ಅವರನ್ನು ಯಾವಾಗಲೂ ಕಾಡುತ್ತಿರುತ್ತದೆ. ಅನಸೂಯಾ ಅವರು ಎಲ್ಲೇ ಹೋದರು ಅವರನ್ನು ಆಂಟಿ ಎಂದು ಕರೆಯುವ ಮೂಲಕ ಗೇಲಿ ಮಾಡುತ್ತಿದ್ದಾರೆ. ಈ ಬಗ್ಗೆ ಅನಸೂಯಾ ಸಾಕಷ್ಟು ಬಾರಿ ಅಸಮಾಧಾನ ಹೊರಹಾಕಿದರೂ ಕೂಡ ಆಂಟಿ ಎಂದು ಕರೆಯುವುದು ಮಾತ್ರ ನಿಂತಿಲ್ಲ. ತಮ್ಮನ್ನು ಆಂಟಿ ಎಂದು ಕರೆದವರ ವಿರುದ್ಧ ದೂರು ದಾಖಲಿಸುವುದಾಗಿಯೂ ಅನಸೂಯಾ ಎಚ್ಚರಿಕೆ ನೀಡಿದ್ದಾರೆ. ಅಂದಿನಿಂದ, ಆ ಪದಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಆದಾಗ್ಯೂ, ಇತ್ತೀಚೆಗೆ, ಅವರು ಹೋಳಿ ಕಾರ್ಯಕ್ರಮಕ್ಕೆ ಹೋದಾಗ, ಅಲ್ಲಿ ಅವರಿಗೆ ಮತ್ತೆ ಅದೇ ಅನುಭವವಾಗಿದೆ.
ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬ ಅನಸೂಯಾ ಅವರನ್ನು ಆಂಟಿ ಎಂದು ಕರೆದನು. ಈ ವೇಳೆ ಆತ ಯಾರೆಂಬುದನ್ನು ಗುರುತಿಸಿದ ಅನಸೂಯಾ, ತಕ್ಷಣ ಮೈಕ್ ತೆಗೆದುಕೊಂಡು ನಿನಗೆ ಧೈರ್ಯವಿದ್ದರೆ ಮೇಲೆ ಬಾ ಎಂದು ಹಿಂದಿಯಲ್ಲಿ ಹೇಳಿದರು. ಅದನ್ನು ಕೇಳಿ ಅಲ್ಲಿದವರೆಲ್ಲ ಒಮ್ಮೆಲೆ ಜೋರಾಗಿ ಕೂಗಿದರು. ಅಷ್ಟೇ ಅಲ್ಲ ಅನಸೂಯಾ ಅವರು ಆ ವ್ಯಕ್ತಿಯ ಕಡೆ ಕೈ ಸನ್ನೆ ಮಾಡಿ, ವಾರ್ನಿಂಗ್ ಕೂಡ ಮಾಡಿದರು. ಅಷ್ಟರಲ್ಲಿ, ಅಲ್ಲಿನ ಸಂಘಟಕರು "ಊ ಅಂಟವಾ ಮಾವಾ" ಹಾಡನ್ನು ಪ್ಲೇ ಮಾಡಿದರು. ಈ ವೇಳೆ ಅನಸೂಯಾ ಅವರ ಮುಖಭಾವಗಳು ಬದಲಾದವು.
ಅಂದಹಾಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಸೂಯಾ ಅವರ ಪೋಸ್ಟ್ಗಳು ಎಷ್ಟು ವೈರಲ್ ಆಗುತ್ತವೆ ಎಂಬುದು ಎಲ್ಲರಿಗೂ ತಿಳಿದಿದೆ. ಆಗಾಗ ತಮ್ಮ ಹಾಟ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ತುಂಬಾ ಹಾಟ್ ಫೋಟೋಗಳನ್ನು ಹರಿಬಿಡುವುದರಿಂದ ಕೆಲವರು ಅನಸೂಯಾ ಅವರ ಡ್ರೆಸ್ಸಿಂಗ್ ಬಗ್ಗೆ ನೆಗೆಟಿವ್ ಕಾಮೆಂಟ್ಗಳನ್ನು ಸಹ ಮಾಡುತ್ತಾರೆ. ಈ ಬಗ್ಗೆ ಈ ಹಿಂದೆ ಪ್ರತಿಕ್ರಿಯೆ ನೀಡಿದ್ದ ಅನಸೂಯಾ, ನನ್ನನ್ನು ಇಷ್ಟಪಡುವವರಿಗೆ ನಾನು ಇನ್ಸ್ಟಾದಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ. ನಾನು ಯಾವುದೇ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತೇನೆ. ಅದು ನನ್ನ ಆಯ್ಕೆ. ನಾನು ಏನು ಧರಿಸಬೇಕು? ನಾನು ಬಿಕಿನಿ ಧರಿಸಬೇಕೇ ಅಥವಾ ಸಂಪೂರ್ಣ ಬಟ್ಟಯನ್ನು ಧರಿಸಬೇಕೆ? ಎಂಬುದು ನನ್ನ ಆಯ್ಕೆ. ಆದರೆ, ಕೆಲವರು ನೆಗೆಟಿವ್ ಕಾಮೆಂಟ್ಗಳ ಮೂಲಕ ನನಗೆ ತೊಂದರೆ ನೀಡುತ್ತಿದ್ದಾರೆ ಅಷ್ಟಕ್ಕೂ ನನ್ನ ಬಗ್ಗೆ ನಿಮ್ಮ ಅಸಮಾಧಾನವೇನು ಎಂದು ಪ್ರಶ್ನೆ ಮಾಡುವ ಮೂಲಕ ಅನಸೂಯಾ ನೆಟ್ಟಿಗರ ವಿರುದ್ಧ ವಾಗ್ದಾಳಿ ನಡೆಸಿದ್ದರು. (ಏಜೆನ್ಸೀಸ್)