ರಸ್ತೆ ಪಕ್ಕ ಕಸ ಚೆಲ್ಲುತ್ತಿದ್ದವ ಪೊಲೀಸ್ ವಶಕ್ಕೆ

18BNK02
Published on

ಶಿಗ್ಗಾಂವಿ: ಪಟ್ಟಣದ ಮುಖ್ಯ ರಸ್ತೆ ಪಕ್ಕದಲ್ಲಿ ಕಸ ಹಾಕುತ್ತಿದ್ದ ಕಟಮಾ ಚಾಲಕನನ್ನು ಪುರಸಭೆ ಮುಖ್ಯಾಧಿಕಾರಿ ತಡೆದು ಗುರುವಾರ ಸಂಜೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ನಾರಾಯಣಪುರ ಗ್ರಾಮದ ಚಾಲಕ ತನ್ನ ಕಟಮಾದಲ್ಲಿ ತ್ಯಾಜ್ಯ ತುಂಬಿಕೊಂಡು ಬಂದು ಪಟ್ಟಣದ ನೀಲಕಂಠೇಶ್ವರ ದೇವಸ್ಥಾನದ ಹತ್ತಿರ ಚೆಲ್ಲಿ ವಾಪಸ್ ಹೋಗುತ್ತಿದ್ದ. ಇದನ್ನು ಗಮನಿಸಿದ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ತಕ್ಷಣ ಆತನನ್ನು ತಡೆದು ಚೆಲ್ಲಿದ ತ್ಯಾಜ್ಯವನ್ನು ಮರಳಿ ಆತನ ಗಾಡಿಗೆ ಹಾಕಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ನಂತರ ಪೊಲೀಸರು ಕಟಮಾ ವಶಕ್ಕೆ ಪಡೆದು ಚಾಲಕನಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವ ಮತ್ತು ಸ್ವಚ್ಛತೆ ಕಾಪಾಡಿಕೊಳ್ಳದ ವ್ಯಾಪಾರಸ್ಥರಿಗೆ ಮತ್ತು ಮಾಂಸದ ಅಂಗಡಿ ಮಾಲೀಕರ ಮೇಲೆ ಸೂಕ್ತ ಕ್ರಮ ಜರುಗಿಸಲಾಗುವುದು. ಅಗತ್ಯಬಿದ್ದಲ್ಲಿ ಅಂಗಡಿಗಳ ಲೈಸನ್ಸ್ ರದ್ದುಪಡಿಸಲಾಗುವುದು ಎಂದು ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net