

ಗಂಗೊಳ್ಳಿ: ಇಲಿ ಪಾಷಾಣ ತಿಂದು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕುಂದಾಪುರ ತಾಲೂಕಿನ ನೂಜಾಡಿ ಗ್ರಾಮದ ಪಾರ್ವತಿ (65) ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.
ಐದು ವರ್ಷಗಳಿಂದ ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದ ಪಾರ್ವತಿ ಜೀವನದಲ್ಲಿ ಬೇಸರಗೊಂಡು ಮೇ 16ರಂದು ಮನೆಯಲ್ಲಿದ್ದ ಇಲಿ ಪಾಷಾಣ ತಿಂದು ಅಸ್ವಸ್ಥಗೊಂಡಿದ್ದು, ಚಿಕಿತ್ಸೆಗಾಗಿ ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.