ಕವನ ವಾಚನ ಸ್ಪರ್ಧೆ

Btw_Poetry
Published on

ಬಂಟ್ವಾಳ: ಕಲ್ಲಡ್ಕ ಶ್ರೀ ರಾಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಜ್ಞಾನ ಸಾಹಿತ್ಯ ಸಂಘದ ವತಿಯಿಂದ ಪಠ್ಯಪುಸ್ತಕದಿಂದ ಆಯ್ದ ಕವನಗಳ ವಾಚನ ಸ್ಪರ್ಧೆ ನಡೆಯಿತು. ಭಾರತಮಾತೆಯ ಭಾವಚಿತ್ರಕ್ಕೆ ಪಷ್ಪಾರ್ಚನೆಗೈದು ಆರಂಭಗೊಂಡ ಕಾರ್ಯಕ್ರಮದಲ್ಲಿ ಪಠ್ಯಪುಸ್ತಕದಿಂದ ಆಯ್ದ ಕವನಗಳನ್ನು 50 ವಿದ್ಯಾರ್ಥಿಗಳು ವಾಚಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಮಂತ್ರಣ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಸ್ಥೆ ಕರ್ನಾಟಕದ ಅಧ್ಯಕ್ಷ ವಿಜಯ್ ಕುಮಾರ್ ಜೈನ್ ವಹಿಸಿ ಮಾತನಾಡಿ, ಸಾಹಿತ್ಯದ ಪ್ರಕಾರಗಳು ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ತೀರ್ಪುಗಾರರಾಗಿ ಉಪನ್ಯಾಸಕಿಯರಾದ ಜಯಲಕ್ಷ್ಮೀ ಮತ್ತು ವಿಭಾನಿ ಸಹಕರಿಸಿದರು.

ಶ್ರೀರಾಮ ಪದವಿ ಕಾಲೇಜಿನ ಉಪಪ್ರಾಂಶುಪಾಲೆ ಸುಕನ್ಯ ಮತ್ತು ಯತಿರಾಜ್ ಮತ್ತು ಪ್ರಜ್ಞಾನ ಸಾಹಿತ್ಯ ಸಂಘದ ನಿರ್ದೇಶಕಿ ರಶ್ಮಿತಾ ಕವಿಗೋಷ್ಠಿಗೆ ಚಾಲನೆ ನೀಡಿದರು. ಸಹನಿರ್ದೇಶಕಿ ಸಂಧ್ಯಾ ಸ್ವಾಗತಿಸಿ, ವಿದ್ಯಾರ್ಥಿನಿಯರಾದ ಮನ್ವಿತಾ ಪ್ರಾರ್ಥಿಸಿ ಪದ್ಮಶ್ರೀ ವಂದಿಸಿದರು. ಅಶ್ವಿನಿ ನಿರೂಪಿಸಿದರು. ಪದ್ಮಶ್ರೀ, ಕವಿತಾ, ಶುಭಲಕ್ಷ್ಮೀ, ಕವನ , ಪಲ್ಲವಿ ಮನ್ವಿತ ವಿಜೇತ ಯಜ್ಞಶ್ರೀ, ಅಶ್ವಿನಿ, ಗೌತಮಿ ಬಹುಮಾನವನ್ನು ಗೆದ್ದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net