ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ, ಕನ್ನಡ ಜನಶಕ್ತಿ ಕೇಂದ್ರ ಹಾಗೂ ನಾಡೋಜ ಡಾ. ಕಮಲಾ ಹಂಪನಾ ಸಾಹಿತ್ಯ ವೇದಿಕೆಯ ಸಹಯೋಗದಲ್ಲಿ ಸೋಮವಾರ ಕವಿಗೋಷ್ಠಿ ಹಾಗೂ ನಾಡೋಜ ಡಾ. ಕಮಲಾ ಹಂಪನಾ ದತ್ತಿ ಉಪನ್ಯಾಸ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ.
ಕನ್ನಡ ಭವನದ ನಯನ ಸಭಾಂಗಣದಲ್ಲಿ ಸಂಜೆ 5.30ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಡಾ.ಎಲ್.ಹನುಮಂತಯ್ಯ, ಪಿ.ಮಲ್ಲಿಕಾರ್ಜುನಪ್ಪ ಪಾಲ್ಗೊಳ್ಳಲಿದ್ದು, ವಿವಿಧ ಕವಿಗಳು ತಮ್ಮ ಕವನ ವಾಚಿಸಲಿದ್ದಾರೆ. ಡಾ.ಚಾಂದಿನಿ ವಿಶೇಷ ಉಪನ್ಯಾಸ ಮಾಡಲಿದ್ದು, ಡಾ.ಬಾಳಾಸಾಹೇಬ್ ಲೋಕಾಪುರ ಮತ್ತು ಚಾಂದಿನಿಯವರಿಗೆ ಡಾ.ಹಂಪ ನಾಗರಾಜಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆಂದು ಲೇಖಕಿಯರ ಸಂಘದ ಕಾರ್ಯದರ್ಶಿ ಭಾರತಿ ಹೆಗಡೆ ತಿಳಿಸಿದ್ದಾರೆ.