

ಸುಬ್ರಹ್ಮಣ್ಯ: ಮಾದಕವಸ್ತು ಸೇವನೆ ವಿರುದ್ಧ ಯುವಜನಾಂಗ ಜಾಗೃತರಾಗಲೇಬೇಕು. ವಿದ್ಯಾರ್ಥಿಗಳು ಈ ಕುರಿತು ಹೆಚ್ಚು ಜಾಗರೂಕರಾಗಿರಬೇಕು. ಮಾದಕವಸ್ತು ಸೇವನೆ, ವಿತರಣೆ ಶಿಕ್ಷಾರ್ಹ ಅಪರಾಧ ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಸಿಬ್ಬಂದಿ ಹೇಮಚಂದ್ರ ಹೇಳಿದರು.
ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು ಕಾಲೇಜು ಮತ್ತು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಶುಕ್ರವಾರ ಮಾದಕವಸ್ತು ನಿಯಂತ್ರಣ ಹಾಗೂ ಪೋಕ್ಸೋ ಕಾನೂನು ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹೆಡ್‌ಕಾನ್‌ಸ್ಟೆಬಲ್ ಪ್ರಮೀಳಾ ಪೋಕ್ಸೋ ಕಾನೂನು ಬಗ್ಗೆ ವಿವರಿಸಿದರು. ಸುಬ್ರಹ್ಮಣ್ಯ ಠಾಣೆ ಎಎಸ್ಸೆ ಥಾಮಸ್ ಅವರು ಮೋಟಾರ್ ವಾಹನ ಕಾನೂನು ಬಗ್ಗೆ ಮಾಹಿತಿ ನೀಡಿದರು. ಜಕ್ಕವ್ವ ಸೈಬರ್ ಕ್ರೈಮ್ ಬಗ್ಗೆ ಮಾಹಿತಿ ನೀಡಿದರು. ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಅಧ್ಯಕ್ಷ ಜಯಪ್ರಕಾಶ್ ಆರ್. ಉಪಸ್ಥಿತರಿದ್ದರು.