

ಕಾಸರಗೋಡು: ಬಾಲಕಿ ಹಾಗೂ ಬಾಲಕಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಚಂದೇರ ಠಾಣೆ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯ 13ರ ಹರೆಯದ ಬಾಲಕಿಗೆ ತನ್ನ ತಾಯಿಯ ಸ್ನೇಹಿತ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆತನ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14ರ ಹರೆಯದ ಬಾಲಕಗೆ ಸಲಿಂಗ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಕನ ಮನೆ ಸನಿಹದ ನಿವಾಸಿ 40ರ ಹರೆಯದ ವ್ಯಕ್ತಿ ವಿರುದ್ಧ ಪೋಕ್ಸೋ ಅನ್ವಯ ಕೇಸ್ ದಾಖಲಾಗಿದೆ.