ಅಂಬೇಡ್ಕರ್ ಕನಸಿನ ಭಾರತ ನಿರ್ಮಾಣವು ಮೋದಿ ಕನಸು : ಡಾ.ಉಮೇಶ್ ಜಾಧವ್ ಹೇಳಿಕೆ

IMG-20240415-WA0017
Published on

ಕಲಬುರ: ಲೋಕಸಭೆ ಚುನಾವಣೆ ಬಿಜೆಪಿಯ ಪ್ರಣಾಳಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದು ಅದರಲ್ಲಿ ಅಂಬೇಡ್ಕರ್ ಭಾರತ ನಿರ್ಮಿಸುವ ಕನಸು ಇದೆ ಎಂದು ಲೋಕಸಭಾ ಸದಸ್ಯ ಡಾ.ಉಮೇಶ್ ಜಾಧವ್ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 133 ನೆಯ ಜಯಂತಿ ದಿನವಾದ ಭಾನುವಾರ ಪ್ರಣಾಳಿಕೆ ಬಿಡುಗಡೆ ಮಾಡಿ ಅಂಬೇಡ್ಕರ್ ಕನಸು ಕಂಡ ಭಾರತ ನಿರ್ಮಾಣ ಮಾಡಲು ಮೋದಿ ಗ್ಯಾರಂಟಿಗಳನ್ನು ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.
ಮುಂದಿನ ಐದು ವರ್ಷಗಳ ಕಾಲ ಉಚಿತ ಪಡಿತರ ವಿತರಣೆ,ಸೂರ್ಯ ಘರ್ ಯೋಜನೆಯಡಿ ಉಚಿತ ವಿದ್ಯುತ್,ಉಚಿತ ಗ್ಯಾಸ್ ಸಂಪರ್ಕ,ಜನೌಷಧಿ ಅಗ್ಗ ದರ, ಆಯುಷ್ಮಾನ್ ಆರೋಗ್ಯ ಸೇವೆಯಡಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ಸೌಲಭ್ಯ ,ಮುದ್ರಾ ಸಾಲ ಮಿತಿ ಹೆಚ್ಚಳ,ಯುವಕರಿಗೆ 3ಕೋಟಿ ಉದ್ಯೋಗ ಸೃಷ್ಟಿ,ಹೊಸ ರೈಲು ಹಳಿ ವಿಸ್ತರಣೆ,ಅಮೃತ್ ಮತ್ತು ನಮೋ ಭಾರತ್ ನಂತಹ ಹೊಸ ರೈಲುಗಳು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರ ಮಾಡುವುದು,3ಕೋಟಿ ಲಕ್ ಪತಿ ದೀದಿ ಗುರಿ,ರೈತರಿಗೆ ಉತ್ತಮ ಬೆಂಬಲ ಬೆಲೆ ನಿಗದಿ,ಕೃಷಿ ಸಮ್ಮಾನ ನಿಧಿ ಯೋಜನೆಗೆ ಪ್ರೋತ್ಸಾಹ,ತಿರುವಳ್ಳುವರ್ ಸಾಂಸ್ಕೃತಿಕ ಕೇಂದ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರಚಾರ , ಗರೀಬ್ (ಬಡವ) ಯುವಕ್ ಹಾಗು ನಾರಿ (ಗ್ಯಾನ್)ಈ ಮೂರು ಕ್ಷೇತ್ರದಲ್ಲಿ ಮಹತ್ವದ ಯೋಜನೆ ಜಾರಿ ಭಾರತವನ್ನು ಜಾಗತಿಕವಾಗಿ ಮೂರನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವನ್ನಾಗಿಸುವುದನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಒಂದು ಜಾತಿ ಪಂಗಡಕ್ಕೆ ಸೀಮಿತವಾದರೆ ಮೋದಿ ಗ್ಯಾರಂಟಿ ಯು ಎಲ್ಲ ಭಾರತೀಯರಿಗೂ ಅನ್ವಯಿಸುವಂತದ್ದು. ಅಂಬೇಡ್ಕರ್ ತಂಡ ಸಾಮಾಜಿಕ ನ್ಯಾಯದೊಂದಿಗೆ ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಭಾರತವು ವಿಶ್ವಗುರುವಾಗಲಿದೆ ಎಂದು ಜಾದವ್ ಪ್ರಣಾಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net