

ನಾಪೋಕ್ಲು: ಸಂಪಾಜೆ ಗ್ರಾಮದ ಕೊಯನಾಡಿನ ಕುಂದಲ್ಪಾಡಿ ಗ್ರಾಮದಲ್ಲಿ ಇತ್ತೀಚೆಗೆ ಕಾಡಾನೆಗಳು ಕಾಫಿ ತೋಟಕ್ಕೆ ನುಗ್ಗಿ ಅಪಾರ ಪ್ರಮಾಣದಲ್ಲಿ ನಷ್ಟ ಉಂಟುಮಾಡಿವೆ.
ತೆಂಗಿನ ಗಿಡ, ಅಡಕೆ, ಬಾಳೆ ಗಿಡಗಳು ನಾಶವಾಗಿವೆ ಎಂದು ಕುಂದಲ್ಪಾಡಿ ಜಯಪ್ರಕಾಶ್ ಅಳಲು ತೋಡಿಕೊಂಡಿದ್ದಾರೆ. ಪದ್ಮನಾಭ ಹಾಗೂ ಹರೀಶ್ ಅವರ ತೋಟಕ್ಕೂ ಆನೆ ಲಗ್ಗೆ ಇಟ್ಟಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ.