

ಕಡಬ: ಸಮಾಜದ ಕಟ್ಟಕಡೆಯ ವ್ಯಕ್ತಿ ಅಭಿವೃದ್ಧಿಯಾದರೆ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗುತ್ತದೆ ಎನ್ನುವ ದೂರದೃಷ್ಟಿಯ ಅಲೋಚನೆ ಸಮರ್ಪಕವಾಗಿ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಅನುಷ್ಠಾನ ಮಾಡುವಲ್ಲಿ ಡಾ.ವೀರೇಂದ್ರ ಹೆಗ್ಗಡೆಯವರು ಸಫಲರಾಗಿದ್ದಾರೆ. ಬಡವರ ಆರ್ಥಿಕ, ಸಾಮಾಜಿಕ ಬದುಕಿನ ಕಷ್ಟ ನಿವಾರಿಸಿ ಸಮಾಜದ ಮುಖ್ಯವಾಹಿನಿಗೆ ಕರೆತರುವಲ್ಲಿ ಯೋಜನೆ ಮಹತ್ತರ ಪಾತ್ರ ವಹಿಸಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಕಾರ್ಯಕ್ರಮ ನಿರ್ವಾಹಕ ನಿರ್ದೆಶಕ ಅನಿಲ್ ಕುಮಾರ್ ಎಸ್.ಎಸ್.ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಡಬ ತಾಲೂಕು, ಬೆಳ್ತಂಗಡಿ ಜನಜಾಗೃತಿ ಪ್ರಾದೇಶಿಕ ವಿಭಾಗ, ರಾಮಕುಂಜ ಗ್ರಾಪಂ, ಶ್ರೀ ರಾಮಕುಂಜೇಶ್ವರ ಪಪೂ ಕಾಲೇಜು ಸಹಯೋಗದೊಂದಿಗೆ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಾಹಣಾ ಸಮಿತಿ ಸ್ವಯಂ ಸೇವಕರ ತರಬೇತಿ ಮತ್ತು ರಾಮಕುಂಜ ಗ್ರಾಮದ ಹಿಂದು ರುದ್ರಭೂಮಿಯಲ್ಲಿ ಗಿಡ ನಾಟಿಗೆ ಚಾಲನೆ ನೀಡಿದ ಬಳಿಕ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಜನಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮಾತನಾಡಿದರು. ಪ್ರಾಂಶುಪಾಲ ಚಂದ್ರಶೇಖರ ಕೆದ್ದೋಟೆ ಶೌರ್ಯ ಘಟಕದ ಸ್ವಯಂಸೇವಕರಿಗೆ ಸಮವಸ್ತ್ರ ವಿತರಿಸಿದರು. ರಾಮಕುಂಜ ಗ್ರಾಪಂ ಅಧ್ಯಕ್ಷೆ ಸುಚೇತಾ, ಮಂಗಳೂರು ಉಷಾ ಫೈರ್ ಸೇಪ್ಟಿ ಕಂಪನಿ ತರಬೇತುದಾರ ಸಂತೋಷ್ ಪೀಟರ್ ಡಿಸೋಜ, ರಾಮಕುಂಜ ಗ್ರಾಪಂ ಮಾಜಿ ಅಧ್ಯಕ್ಷೆ ಮಾಲತಿ ಕದ್ರ, ಪ್ರಗತಿಬಂಧು ಒಕ್ಕೂಟಗಳ ಗೋಳಿತೊಟ್ಟು ವಲಯಾಧ್ಯಕ್ಷ ಬಾಲಕೃಷ್ಣ ಅಲೆಕ್ಕಿ, ಜನಜಾಗೃತಿ ಕಡಬ ತಾಲೂಕು ಅಧ್ಯಕ್ಷ ಮಹೇಶ್ ಕೆ.ಸವಣೂರು, ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ಯೋಜನೆಯ ದ.ಕ.ನಿರ್ದೇಶಕ ಪ್ರವೀಣ್ ಕುಮಾರ್, ಸುಳ್ಯ ತಾಲೂಕು ಕೇಂದ್ರ ಒಕ್ಕೂಟ ಅಧ್ಯಕ್ಷ ಸುರೇಶ್, ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾ ಸದಸ್ಯ ಲಕ್ಷ್ಮೀ ನಾರಾಯಣ ರಾವ್ ಆತೂರು, ಶೌರ್ಯ ವಿಪತ್ತು ನಿರ್ವಾಹಣಾ ಸಮಿತಿಯ ಪ್ರಶಾಂತ್, ಮನೋಜ್, ಜಯರಾಮ, ಭವಾನಿ, ಶಂಕರ, ಸುರೇಶ್, ಸತೀಶ್ ಉಪಸ್ಥಿತರಿದ್ದರು.
ಯೋಜನಾಧಿಕಾರಿ ಜೈವಂತ್ ಪಟಗಾರ್ ವರದಿ ವಾಚಿಸಿದರು. ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸ್ವಾಗತಿಸಿ. ಗೋಳಿತ್ತೊಟ್ಟು ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿ. ಉಡುಪಿ ಪ್ರಾದೇಶಿಕ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು.
ವಿಪತ್ತು ನಿರ್ವಾಹಣಾ ಘಟಕದ ಸದಸ್ಯರಿಗೆ ಸಮವಸ್ತ್ರ, ಒಕ್ಕೂಟದ ಪದಾಧಿಕಾರಿಗಳಿಗೆ ಸಸಿಗಳ ವಿತರಣೆ, ಸಾಧಕ ಶೌರ್ಯ ಘಟಕಗಳಿಗೆ ಪ್ರಮಾಣ ಪತ್ರ ವಿತರಣೆ, ಫಲಾನುಭವಿಗಳಿಗೆ ವಿವಿಧ ಅನುದಾನ ವಿತರಿಸಲಾಯಿತು.