ನ್ಯಾಯದಹಳ್ಳ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ

ನ್ಯಾಯದಹಳ್ಳ ಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮ
Published on

ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೊಡ್ಲಿಪೇಟೆ ವಲಯ, ಬೆಸೂರು ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಶನಿವಾರಸಂತೆ ವಲಯ ಆಶ್ರಯದಲ್ಲಿ ನ್ಯಾಯದಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಪರಿಸರ ಮಾಹಿತಿ ಮತ್ತು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬೆಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಗಿಡ ನೆಡಲು ಹೆಚ್ಚಿನ ಒತ್ತು ನೀಡುವಂತೆ ಹೇಳಿದರು.

ಸಂಪನ್ಮೂಲಗಳ ವ್ಯಕ್ತಿಯಾಗಿ ಭಾಗವಹಿಸಿದ್ದ ಆಯುರ್ವೇದ ಆಸ್ಪತ್ರೆಯ ವೈದ್ಯೆ ಸ್ಮೀತಾ ಮಾತನಾಡಿ, ಔಷಧ ಸಸ್ಯಗಳ ಮಹತ್ವ ತಿಳಿಸಿದರು.

ನ್ಯಾಯದಳ್ಳ ಶಾಲಾ ಮುಖ್ಯ ಶಿಕ್ಷಕಿ ಲಲಿತಾ ಮಾತನಾಡಿ, ಪರಿಸರ ಸಂರಕ್ಷಣೆಗೆ ಒತ್ತು ನೀಡುವಂತೆ ಕರೆ ನೀಡಿದರು.

ಅರಣ್ಯ ಪಾಲಕ ಆನಂದ್, ಅರಣ್ಯ ವಿಕ್ಷಕ ರಮೇಶ್, ಶಿಕ್ಷಕಿ ಮಂಜುಳಾಮಣಿ, ರುಕ್ಮಿಣಿ, ಮಂಜುನಾಥ, ಒಕ್ಕೂಟದ ಅಧ್ಯಕ್ಷ ಸುನಂದಾ, ಕೊಡ್ಲಿಪೇಟೆ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ರಾಜಣ್ಣ ಕೃಷಿ ಮೇಲ್ವಿಚಾರಕ ಹರೀಶ್ ಕುಮಾರ್ ಸೇವಾಪ್ರತಿನಿಧಿ ಶಾರದಮ್ಮ ಮತ್ತು ಶಾಂತಿ, ಆಶಾ ಕಾರ್ಯಕರ್ತೆ ಧನಲಕ್ಷೀ, ಸ್ವಸಹಾಯ ಸಂಘದ ಸದಸ್ಯರು ಶಾಲೆಯ ಮಕ್ಕಳು ಇದ್ದರು.

ಶಾಲಾ ಆವರಣದಲ್ಲಿ ನೆಲ್ಲಿ, ಸೀಬೆ, ಕಾಡು ಬಾದಮಿ, ಹೆಬ್ಬಲಸು, ನೇರಳೆ ಇತರೆ ಗಿಡಗಳನ್ನು ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net