ತಾಯಿ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ

03
Published on

ಸುಳ್ಯ: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಮಂಡಲ ಸಮಿತಿ ವತಿಯಿಂದ ತಾಯಿಯ ಹೆಸರಿನಲ್ಲೊಂದು ಗಿಡ ನೆಡುವ ಕಾರ್ಯಕ್ರಮ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಶಾಂತಿನಗರದಲ್ಲಿ ನಡೆಯಿತು.

ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಮಹೇಶ್ ಜೋಗಿ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಬಿಜೆಪಿ ಒಬಿಸಿ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ, ಮಂಡಲ ಒಬಿಸಿ ಅಧ್ಯಕ್ಷ ಗಿರೀಶ್ ಐನೆಕಿದು, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ಪನ್ನೆ, ನಗರ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಅಡ್ಕಾರ್, ಸದಾನಂದ ಆಚಾರ್ಯ, ಸೋಮನಾಥ ಪೂಜಾರಿ, ಉಪಾಧ್ಯಕ್ಷರಾದ ಚಂದ್ರಶೇಖರ, ರಾಧಾಕೃಷ್ಣ ನಾಯಕ್ ಶಾಂತಿನಗರ, ಕಾರ್ಯದರ್ಶಿ ನಿರ್ಮಲಾ, ಸರಿತಾ, ಕೋಶಾಧಿಕಾರಿ ಪೂರ್ಣಿಮಾ, ಕಾರ್ಯಕಾರಿಣಿ ಸದಸ್ಯರಾದ ಪುರಂದರ, ಅಶೋಕ್ ಕುಮಾರ್, ಚಂದ್ರಾವತಿ, ಅನಿತಾ ಪ್ರಕಾಶ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net