ಗಿಳಿಯಾರು ಅಂಗನವಾಡಿಯಲ್ಲಿ ಗಿಡ ವಿತರಣೆ

kota (8)
Published on

ಕೋಟ: ಮೂಡುಗಿಳಿಯಾರು ಹಾಗೂ ಹೊನ್ನಾರಿ ಅಂಗನವಾಡಿಯಲ್ಲಿ ಗಿಳಿಯಾರು ಯುವಕ ಮಂಡಲದ ವತಿಯಿಂದ ಗಿಡಗಳ ವಿತರಣೆ, ವನಮಹೋತ್ಸವ, ಉಚಿತ ಬ್ಯಾಗ್ ಹಾಗೂ ಎಲ್ ಕೆಜಿ ಯುಕೆಜಿ ವಿದ್ಯಾರ್ಥಿಗಳಿಗೆ ಡೆಸ್ಕ್ ಸೆಟ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ಜರುಗಿತು. ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ಸುಭಾಸ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ವಸಂತಿ, ಎಸ್‌ಡಿಎಂಸಿ ಅಧ್ಯಕ್ಷ ಯೋಗಾನಂದ ಪೂಜಾರಿ, ಪ್ರಮುಖರಾದ ಜಲಜಾಕ್ಷಿ ಹಾಗೂ ಗಂಗಾ, ಪಾಲಕರು, ಯೋಗಾನಂದ ಹೆಗ್ಡೆ, ರಾಮಚಂದ್ರ ಆಚಾರ್,ನಯನ್, ಜಯ, ಸುರೇಶ್ ಗಿಳಿಯಾರ್ ಮತ್ತು ರಾಘವೇಂದ್ರ ಇದ್ದರು. ಆದರ್ಶ ವಂದಿಸಿದರು. ನಂದೀಶ್ ಹೇರ್ಳೆ ಕಾರ್ಯಕ್ರಮ ನಿರೂಪಿಸಿದರು. ಜೆ.ಪಿ ಗಿಳಿಯಾರ್, ಪುಣ್ಯ ಕ್ಯಾಟ್ರಸ್ ಸಂಸ್ಥೆ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net