ಮನೆಗೊಂದು ಗಿಡವನ್ನಾದರೂ ನೆಟ್ಟು ಬೆಳೆಸಿ

ಮನೆಗೊಂದು ಗಿಡವನ್ನಾದರೂ ನೆಟ್ಟು ಬೆಳೆಸಿ
Published on

ಸೋಮವಾರಪೇಟೆ: ತಾಲೂಕಿನ ಬಾಣಾವಾರ ಅರಣ್ಯ ಇಲಾಖೆ ವತಿಯಿಂದ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ನಿವೃತ್ತ ಶಿಕ್ಷಕ ವೀರಭದ್ರಪ್ಪ ಬುಧವಾರ ಚಾಲನೆ ನೀಡಿದರು.

ಪರಿಸರವನ್ನು ಉಳಿಸಿ ಬೆಳೆಸುವುದು ಜನಸಾಮಾನ್ಯರ ಕರ್ತವ್ಯವಾಗಿದ್ದು, ಮನೆಗೊಂದು ಗಿಡವನ್ನಾದರೂ ನೆಟ್ಟು ಅದನ್ನು ಉಳಿಸಿ ಬೆಳೆಸುವ ಕೆಲಸ ಮಾಡಿದಲ್ಲಿ ಮಾತ್ರ ಮುಂದಿನ ಪೀಳಿಗೆಗೂ ಸಂರಕ್ಷಿತ ಪರಿಸರವನ್ನು ನೀಡಬಹುದು ಎಂದರು.

ಗ್ರಾಮಸ್ಥರಾದ ವಿಠಲ, ಚಂದ್ರು, ಮೋಹನ, ಅರಣ್ಯ ಇಲಾಖೆ ಅಧಿಕಾರಿ ಶ್ರವಣ್ ವಿಭೂತಿ, ಸಿಬ್ಬಂದಿ ಪ್ರವೀಣ್, ಧರ್ಮ, ವಿಕಾಸ್, ವಿಶ್ವಾಸ್ ಹಾಗೂ ದಿಲೀಪ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net