

ಮಂಜೇಶ್ವರ: ಕುಳೂರು ಆದರ್ಶ ನಗರದ ಶ್ರೀ ಹರಿ ಭಜನಾ ಮಂದಿರದ ಸ್ವರ್ಣ ಲೇಪಿತ ರಜತ ಚಿತ್ರ ಫಲಕ ಪ್ರತಿಷ್ಠಾ ಮಹೋತ್ಸವು ಕೊಂಡೆವೂರು ಶ್ರೀ ಯೋಗಾದ ಸರಸ್ವತಿ ಸ್ವಾಮೀಜಿ ಮತ್ತು ಕುಳೂರು ಬೀಡು ಕೆ.ದಾಸಣ್ಣ ಆಳ್ವರ ಮಾರ್ಗದರ್ಶನದಲ್ಲಿ ಹರಿನಾರಾಯಣ ಕಲ್ಯಾಣತ್ತಾಯ ಉಪಸ್ಥಿತಿಯಲ್ಲಿ ತಂತ್ರಿವರ್ಯ ಬ್ರಹ್ಮಶ್ರೀ ರಾಮಪ್ರಸಾದ ನಲ್ಲೂರಾಯ ಉರ್ಮಿ ಪೌರೋಹಿತ್ಯದಲ್ಲಿ ಜರಗಿತು.
ಧಾರ್ಮಿಕ ಸಭೆಯು ಮಂದಿರದ ಗೌರವಾಧ್ಯಕ್ಷ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಯಿತು. ಒಡಿಯೂರು ಗುರುದೇವದತ್ತ ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮಂದಿರದ ಗೌರವಾಧ್ಯಕ್ಷ ಸದಾಶಿವ ಶೆಟ್ಟಿ ಕನ್ಯಾನ ಅವರನ್ನು ಮಂದಿರದ ವತಿಯಿಂದ ಸನ್ಮಾನಿಸಲಾಯಿತು.
ಮಂದಿರದ ಗೌರವ ಸಲಹೆಗಾರ ಡಾ.ಜಯಪ್ರಕಾಶ್ ನಾರಾಯಣ್ ತೊಟ್ಟತ್ತೋಡಿ, ಕರ್ನಾಟಕದ ಮಾಜಿ ಸಚಿವ ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ದ.ಕ. ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ಪೊಯ್ಯೇಲು ಪಿ.ಆರ್.ಶೆಟ್ಟಿ, ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ, ಪಟ್ಲ ಫೌಂಡೇಷನ್ ಉಪ್ಪಳ ಘಟಕದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಡಾ.ಸಂದೀಪ್ ಹೆಗ್ಡೆ ಕುಳೂರು ಬೀಡು, ಮಂದಿರದ ಸಂಚಾಲಕ ಮೋಹನ್ ಶೆಟ್ಟಿ ಮಜ್ಜಾರು, ಅಂಬಾರು ಸದಾಶಿವ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ, ಪ್ರಸಂಗಕರ್ತ ಯೋಗೀಶ್ ರಾವ್ ಚಿಗುರುಪಾದೆ ಉಪಸ್ಥಿತರಿದ್ದರು.
ಮಂದಿರದ ಕಾರ್ಯಾಧ್ಯಕ್ಷ ನಾರಾಯಣ ನಾಯ್ಕ ನಡುಹಿತ್ಲು ಸ್ವಾಗತಿಸಿದರು. ಅಂಗಡಿದಾರು ಜಯಪ್ರಕಾಶ ಶೆಟ್ಟಿ ನಿರೂಪಿಸಿದರು. ಕಾರ್ಯದರ್ಶಿ ಪ್ರಮೋದ್ ಶೆಟ್ಟಿ ವಂದಿಸಿದರು. ವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶ್ರೀ ಹರಿ ಲೀಲೆ ಯಕ್ಷಗಾನ ಬಯಲಾಟ ನಡೆಯಿತು.