ಆರೋಗ್ಯ ಕ್ಷೇತ್ರದ ಸೌಲಭ್ಯ ಬಲವರ್ಧನೆ: ತೆಲಂಗಾಣ ಸಿಎಂ ಎ.ರೇವಂತ್ ರೆಡ್ಡಿ ಭರವಸೆ

Pink run - 1
Published on

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿನ ಮೂಲಸೌಕರ್ಯವನ್ನು ಸುಧಾರಿಸುವುದು ಸರ್ಕಾರದ ಬದ್ಧತೆಯಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಭರವಸೆ ನೀಡಿದ್ದಾರೆ.

ಭಾರತದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಎಂಇಐಎಲ್ (ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್) ಮತ್ತು ಸುಧಾ ರೆಡ್ಡಿ ಫೌಂಡೇಶನ್ ಭಾನುವಾರ ಹೃದರಾಬಾದ್‌ನ ಗಚಿಬೌಲಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ‘ಪಿಂಕ್ ರನ್ -2024’ ಮ್ಯಾರಥಾನ್‌ನಲ್ಲಿ ಪಾಲ್ಗೊಂಡು ಮಾತನಾಡಿದರು.

ಕುಟುಂಬ ಮತ್ತು ಸಮುದಾಯಗಳ ಯೋಗಕ್ಷೇಮದ ಅಡಿಪಾಯವಾಗಿರುವ ಮಹಿಳೆಯರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆಗಳು ಮತ್ತು ಅಲ್ಲಿನ ಆರೋಗ್ಯ ಸೇವೆಗಳನ್ನು ಮತ್ತಷ್ಟು ಬಲಪಡಿಸುವುದಾಗಿ ಸಿಎಂ ಹೇಳಿದರು.

ಎಸ್.ಆರ್. ೌಂಡೇಶನ್ ಸಂಸ್ಥಾಪಕಿ ಸುಧಾ ರೆಡ್ಡಿ ಮಾತನಾಡಿ, ಪಿಂಕ್ ಪವರ್ ರನ್ ಕೇವಲ ಒಂದು ಓಟವಷ್ಟೇ ಆಲ್ಲ. ಇದು ಕ್ಯಾನ್ಸರ್‌ನಿಂದ ಬದುಕುಳಿದವರ ಸ್ಪೂರ್ತಿದಾಯಕ ಕಥೆಗಳನ್ನು ಜನರಿಗೆ ತಿಳಿಸುವ ಮೂಲಕ ಸಮುದಾಯವನ್ನು ಪ್ರೇರೇಪಿಸುವುದಾಗಿದೆ. ಆ ಮೂಲಕ ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಸಿಸುವುದರ ಜತೆಗೆ ಬಾಧಿತರಿಗೆ ಭರವಸೆ ನೀಡುವುದಾಗಿದೆ ಎಂದರು.

ಮೂರು ವಿಭಾಗಗಳಲ್ಲಿ ಜಾಗೃತಿ ಓಟ: ಮ್ಯಾರಥಾನ್ ಮೂಲಕ ಕ್ಯಾನ್ಸರ್ ಬಗೆಗಿನ ತಪ್ಪು ಅಭಿಪ್ರಾಯಗಳನ್ನು ತೊಡೆದುಹಾಕಲು ಹಾಗೂ ಆರಂಭಿಕ ರೋಗ ಪತ್ತೆ ಮತ್ತು ಚಿಕಿತ್ಸೆಯಿಂದಾಗಿ ಕ್ಯಾನ್ಸರ್ ಗೆಲ್ಲಬಹುದೆಂದು ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಈ ವೇಳೆ 3 (3 ಕಿ.ಮೀ., 5 ಕಿ.ಮೀ. ಮತ್ತು 10 ಕಿ.ಮೀ.) ವಿಭಾಗಗಳಲ್ಲಿ ಪಿಂಕ್ ಪವರ್ ರನ್ ಆಯೋಜಿಸಲಾಗಿತ್ತು. ಭಾಗವಹಿಸಿದವರಿಗೆ ಕಿಟ್‌ಗಳು ಹಾಗೂ ಪೌಷ್ಟಿಕ ಆಹಾರ ನೀಡಲಾಯಿತು. ಓಟದ ಪೂರ್ವ ಹಾಗೂ ನಂತರದಲ್ಲಿ ಆರೋಗ್ಯಕರ ಜೀವನ ಶೈಲಿ ಕುರಿತು ಅರಿವು ಮೂಡಿಸಲಾಯಿತು. ಓಟದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಯಿತು.

ಓಟದಲ್ಲಿ ತೆಲಂಗಾಣ ಆರೋಗ್ಯ ಸಚಿವ ದಾಮೋದರ್ ರಾಜಾ ನರಸಿಂಹ, ಎಂಇಐಎಲ್ ವ್ಯವಸ್ಥಾಪಕ ನಿರ್ದೇಶಕ ಪಿ.ವಿ. ಕೃಷ್ಣರೆಡ್ಡಿ ಮತ್ತು ಎಸ್‌ಆರ್ ಫೌಂಡೇಶನ್ ಸಂಸ್ಥಾಪಕಿ ಸುಧಾರೆಡ್ಡಿ, ಉಷಾ ಲಕ್ಷ್ಮಿ, ಸರ್ಕಾರಿ ಅಧಿಕಾರಿ ಕ್ರಿಸ್ಟಿನಾ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net