ಉಚಿತ ಪಿಂಕ್ ಆ್ಯಂಬುಲೆನ್ಸ್ ಸೇವೆಗೆ ಚಾಲನೆ

Pink Ambulance
Published on

ಬೆಂಗಳೂರು: ಉತ್ತರ ಬೆಂಗಳೂರಿನ ನಾಗವಾರದಲ್ಲಿನ ಒನ್ ಪಾಯಿಂಟ್ ಕ್ರಿಸ್ ಅಮೆರಿಕನ್ ಆಸ್ಪತ್ರೆಯಲ್ಲಿ ಆರಂಭಿಸಿರುವ ರೇಡಿಯಾಲಜಿ ವಿಭಾಗ ಉದ್ಘಾಟನೆ ಹಾಗೂ ಉಚಿತ ಪಿಂಕ್ ಆ್ಯಂಬುಲೆನ್ಸ್ ಸೇವೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಆಸ್ಪತ್ರೆಯು ಬಿಪಿಎಲ್ ಕಾರ್ಡು ಹೊಂದಿರುವ 100 ಬಡ ರೋಗಿಗಳಿಗೆ ಉಚಿತ ಮೆಮೊಗ್ರಫಿ ಮತ್ತು ಆಸ್ಪತ್ರೆ 5 ಕಿಮೀ ವ್ಯಾಪ್ತಿಯ ಮಹಿಳೆಯರಿಗೆ ಉಚಿತ ಪಿಂಕ್ ಆಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿರುವ ಆಸ್ಪತ್ರೆ ಕಾರ್ಯವನ್ನು ಶ್ಲಾಸಿದರು.

ಆಸ್ಪತ್ರೆ ಅಧ್ಯಕ್ಷ ಡಾ. ರಾಬರ್ಟ್ ಕ್ರಿಸ್ಟೋಫರ್ ಮಾತನಾಡಿ, ಬೆಂಗಳೂರು ಮತ್ತು ಚೆನ್ನೈ ಹಾಗೂ ಸುತ್ತಮುತ್ತ ಇನ್ನೂ 10 ಆಸ್ಪತ್ರೆಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದು, ಇದಕ್ಕಾಗಿ ಸುಮಾರು ಒಂದು ಸಾವಿರ ಕೋಟಿ ರೂ. ಹೂಡಿಕೆಯ ಯೋಜನೆ ಸಿದ್ದಗೊಂಡಿರುವುದಾಗಿ ಹೇಳಿದರು. ಈ ವೇಳೆ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net