ಉಭಯ ಮುಖ್ಯಮಂತ್ರಿಗಳ ಮಧ್ಯೆ ಮಹತ್ವದ ಮಾತುಕತೆ

New Project (12)
Published on

ಬೆಂಗಳೂರು: ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಮಧ್ಯೆ ಪ್ರಸ್ತಾವಿತ ರೈಲ್ವೆ ಯೋಜನೆಗಳ ಕುರಿತು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ನಡುವೆ ಮಹತ್ವದ ಮಾತುಕತೆ ಭಾನುವಾರ ನಡೆಯಿತು.

ಕೋಲಾರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸಿಪಿಎಂ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯ್ ಅವರು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ರಾಜ್ಯದ ಸಿಎಂ ಬೊಮ್ಮಾಯಿ‌ ಅವರಿಗೆ ಸೌಜನ್ಯದ ಭೇಟಿ ವೇಳೆ ರೈಲ್ವೆ ಯೋಜನೆಗಳ ಬಗ್ಗೆ ವಿಚಾರ ವಿನಿಮಯವಾಗಿದೆ.

ತಲಶ್ಶೇರಿ–ಮೈಸೂರು ಹಾಗೂ ನಿಲಂಬೂರು–ನಂಜನಗೂಡು ರೈಲ್ವೆ ಯೋಜನೆಯ ಅನುಷ್ಠಾನದ ಕುರಿತು ಉಭಯ ನಾಯಕರು ಚರ್ಚಿಸಿದರು.

ಜತೆಗೆ ತಿರುವನಂತಪುರ–ಕಾಸರಗೋಡು ಸೆಮಿ ಹೈ–ಸ್ಪೀಡ್‌ ರೈಲು ಮಾರ್ಗ ಹಾಗೂ ಸಿಲ್ವರ್‌ ಮಾರ್ಗವನ್ನು ಮಂಗಳೂರಿನವರೆಗೂ ವಿಸ್ತರಣೆಗೆ ಕೇರಳ ಸರ್ಕಾರ ಸಿದ್ಧಪಡಿಸಿದ ಪ್ರಸ್ತಾವನೆಯೂ ಚರ್ಚೆಯಾಯಿತು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net