ಸ್ತಂಭ ಪ್ರತಿಗ್ರಹ, ಶಾಶ್ವತ ಯೋಜನೆಗಳ ಸ್ವೀಕಾರ

STHAMBHA
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಸಮಗ್ರ ಜೀರ್ಣೋದ್ಧಾರ ಕಾರ್ಯಗಳ ಅಂಗವಾಗಿ ಪ್ರಥಮ ಹಂತದಲ್ಲಿ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಂಡಿರುವ ಶ್ರೀ ಮಾರಿಯಮ್ಮ ದೇವಿ ಮತ್ತು ಶ್ರೀ ಉಚ್ಚಂಗಿ ದೇವಿ ಹಾಗೂ ಸಮಗ್ರ ದೇವಸ್ಥಾನದ ವಿವಿಧ ಸ್ತಂಭ ಪ್ರತಿಗ್ರಹ ಧಾರ್ಮಿಕ ಕಾರ್ಯಕ್ರಮ ಸೋಮವಾರ ನೆರವೇರಿತು.

ಕ್ಷೇತ್ರದ ಪ್ರಧಾನ ತಂತ್ರಿ ಕೆ.ಪಿ.ಕುಮಾರಗುರು ತಂತ್ರಿ ಮತ್ತು ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ವಾಸುದೇವ ಶೆಟ್ಟಿ ಉಪಸ್ಥಿತಿಯಲ್ಲಿ ಸ್ತಂಭ ಪ್ರತಿಗ್ರಹ ಧಾರ್ಮಿಕ ವಿಧಾನದ ಪ್ರಕ್ರಿಯೆಗಳು ನಡೆದವು.

ವಿವಿಧ ಶಾಶ್ವತ ಕೊಡುಗೆಗಳ ದಾನಿಗಳಾದ ತೋನ್ಸೆ ಆನಂದ ಎಂ.ಶೆಟ್ಟಿ, ಪ್ರಭಾಕರ ಶೆಟ್ಟಿ ಮಂಡಗದ್ದೆ, ಕನ್ಯಾನ ಸದಾಶಿವ ಶೆಟ್ಟಿ, ಮಹೇಶ್ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ಬಿ.ಎನ್.ಶಂಕರ ಪೂಜಾರಿ, ಮಾಧವ ಆರ್.ಪಾಲನ್ ಸಹಿತ ಶಿಲಾಸ್ತಂಭ ಮತ್ತು ಶಿಲಾಮೂರ್ತಿಯ ದಾನಿಗಳು, ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಹೊಸ ಮಾರಿಗುಡಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮನೋಹರ ಎಸ್.ಶೆಟ್ಟಿ ಕಾಪು, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ್ ಸುಂದರ್ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ.ಶೆಟ್ಟಿ ಹಾಗೂ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ, ಆರ್ಥಿಕ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿ, ನವದುರ್ಗಾ ಲೇಖನ ಯಜ್ಞ ಸಮಿತಿ, ಪ್ರಚಾರ ಸಮಿತಿ, ಗ್ರಾಮ ಸಮಿತಿ ಸಂಚಾಲಕರು, ಪದಾಧಿಕಾರಿಗಳು ಮತ್ತು ಕಾಪು ಸಾವಿರ ಸೀಮೆಯ ಭಕ್ತರು ಉಪಸ್ಥಿತರಿದ್ದರು.

ಬೃಹತ್ ಶಿಲಾಸ್ತಂಭ

ಬಿಲ್ಲವ ಸಮಾಜದ ವತಿಯಿಂದ ಒದಗಿಸಲಾದ ಮಾರಿಯಮ್ಮ ದೇವಿಯ ಗರ್ಭಗುಡಿಯೊಳಗಿನ ಒಂದು ಬೃಹತ್ ಶಿಲಾಸ್ತಂಭ, ಉಚ್ಚಂಗಿ ಗುಡಿಯ ಇಳಕಲ್ ಶಿಲೆಯ ಗೋಪುರ ಸಹಿತ ಸ್ವರ್ಣಶಿಖರ, ಮಹಾದ್ವಾರದ ಪೂರ್ವ ಬದಿಯ ಮುಚ್ಚಿಗೆ, ಮುಖಮಂಟಪದ ಪಿಲ್ಲರ್, ಮುಖಮಂಟಪದ ಶಿಲಾಮೂರ್ತಿ, ಸುತ್ತುಪೌಳಿಯ ಪಿಲ್ಲರ್, ಅಗ್ರಸಭೆಯ ಪಿಲ್ಲರ್, ಪ್ರದಕ್ಷಿಣೆ ಪಥದ ಪಿಲ್ಲರ್ ಸಹಿತ ವಿವಿಧ ಶಾಶ್ವತ ಯೋಜನೆಗಳನ್ನು ಸ್ವೀಕರಿಸಲಾಯಿತು. ಮಹಾಸಂಕಲ್ಪ, ಪ್ರತಿಗ್ರಹ ವಿಧಾನದ ಬಳಿಕ ದಾನಿಗಳನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net