ತುಂಬೆಯಲ್ಲಿ ರಸ್ತೆ ಮಧ್ಯೆ ಹುಲ್ಲಿನ ರಾಶಿ

New Project (3)
Published on

ಬಂಟ್ವಾಳ: ಬಿ.ಸಿ.ರೋಡು-ಸುರತ್ಕಲ್ ಚತುಷ್ಪಥ ಹೆದ್ದಾರಿಯ ರಸ್ತೆ ವಿಭಾಜಕದಲ್ಲಿ ನೆಟ್ಟ ಅಲಂಕಾರಿಕ ಗಿಡಗಳು ನಿರ್ವಹಣೆಯಿಲ್ಲದೆ ಆರಂಭದ ವರ್ಷದಲ್ಲೇ ಒಣಗಿ ಹೋಗಿವೆ. ಆ ಬಳಿಕ ಪ್ರತಿ ವರ್ಷ ಮಳೆಗಾಲದಲ್ಲಿ ಆಳೆತ್ತರಕ್ಕೆ ಹುಲ್ಲು, ಕಳೆಗಿಡ ಬೆಳೆಯುತ್ತದೆ.

ಮಳೆಗಾಲ ಮುಗಿದ ಕೂಡಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುಲ್ಲು, ಕಳೆಗಿಡಗಳನ್ನು ತೆರವುಗೊಳಿಸುತ್ತದೆ. ಆದರೆ ತೆರವುಗೊಳಿಸಿದ ಕಸವನ್ನು ಅಲ್ಲಿಂದ ಸ್ವಚ್ಛಗೊಳಿಸುವ ಬದಲು ಡಿವೈಡರ್ ಮಧ್ಯದಲ್ಲೇ ಬಿಟ್ಟು ಹೋಗಲಾಗುತ್ತದೆ.

ಈ ಬಾರಿ ಮಳೆಗಾಲ ಮುಗಿದ ಕೂಡಲೇ ರಸ್ತೆ ವಿಭಾಜಕದ ಮಧ್ಯೆ ಬೆಳೆದಿದ್ದ ಹುಲ್ಲನ್ನು ಜೆಸಿಬಿ ಮೂಲಕ ತೆರವುಗೊಳಿಸಿ ಅವುಗಳನ್ನು ಡಿವೈಡರ್‌ನಲ್ಲಿಯೇ ಅಲ್ಲಲ್ಲಿ ರಾಶಿ ಹಾಕಲಾಗಿದೆ. ತುಂಬೆಯಿಂದ ಬ್ರಹ್ಮರಕೂಟ್ಲುವರೆಗೆ ಹಾಗೆಯೇ ಇದ್ದು ತಲಪಾಡಿ ಬಳಿ ಸ್ವಲ್ಪ ಜಾಗದಲ್ಲಿ ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಅಲ್ಲಿಂದ ಕೈಕಂಬದವರೆಗೆ ಹುಲ್ಲು ತೆರವಾಗಿಲ್ಲ. ಡಿವೈಡರ್ ಮಧ್ಯೆ ರಾಶಿ ಹಾಕಿರುವ ಮಣ್ಣು ಕಳೆಗಿಡದಲ್ಲಿ ಮಳೆ, ಮುಂಜಾನೆಯ ಹನಿಗೆ ಮತ್ತೆ ಹುಲ್ಲು ಬೆಳೆದುಕೊಂಡಿದೆ. ಈ ರೀತಿಯ ಕೆಲಸದಿಂದ ಹುಲ್ಲು ತೆರವುಗೊಳಿಸಿ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net