ಹಿರೇಬಂಡಾಡಿಯಲ್ಲಿ ಆನೆ ಓಡಾಟ

PTR_22 DEC_6
Published on

ಪುತ್ತೂರು: ಕಾಡಿನ ಕಡೆಗೆ ಕಳುಹಿಸಿದ ಆನೆ ಸಂಪಾಜೆ ಭಾಗದಿಂದ ಮತ್ತೆ ಹಿರೇಬಂಡಾಡಿ ಕಡೆಗೆ ಬಂದಿದ್ದು, ಅರಣ್ಯ ಇಲಾಖೆಯವರು ಹುಡುಕಾಟ ಪ್ರಾರಂಭಿಸಿದ್ದಾರೆ.

ಸಂಪಾಜೆಯಲ್ಲಿದ್ದ ಒಂಟಿ ಸಲಗ ಕಳೆದೆರಡು ದಿನಗಳ ಹಿಂದೆ ಮಾಡಾವು ಭಾಗಕ್ಕೆ ಬಂದಿದೆ ಎಂದು ಹೇಳಲಾಗಿದೆ. ಮಾಡಾವಿನ ಕಲಾಯಿ ಎಂಬಲ್ಲಿ ಆನೆ ಹಾದುಹೋದ ಕುರುಹು ಪತ್ತೆಯಾಗಿದೆ. ಪುರುಷರಕಟ್ಟೆ ಭಾಗವಾಗಿ ಬೆಳ್ಳಿಪ್ಪಾಡಿ ಕಠಾರದಲ್ಲಿ ಕುಮಾರಧಾರಾ ನದಿ ದಾಟಿ ಹಿರೇಬಂಡಾಡಿ ತಲುಪಿದೆ. ಪೆರಾಬೆ ಎಂಬಲ್ಲಿ ಪ್ರಸಾದ್ ಶೆಟ್ಟಿ ಮನೆಯ ಹಿಂಬದಿಯಲ್ಲೇ ಆನೆ ಹಾದು ಹೋಗಿದೆ. ಆನೆ ಹಾದು ಹೋದ ಹಾದಿಯಲ್ಲಿ ಅಡಿಕೆ ತೆಂಗು ಬಾಳೆಗಿಡಗಳನ್ನು ಹಾಳು ಮಾಡಿದೆ. ಜೂನ್ ತಿಂಗಳಲ್ಲಿ ಎರಡು ಕಾಡಾನೆಗಳು ಭಾಗಮಂಡಲದಿಂದ ಇದೇ ಮಾರ್ಗವಾಗಿ ಬೆಳ್ಳಿಪ್ಪಾಡಿ ದಾಟಿ ನಂತರ ಹಿಂದಿರುಗಿ ಮಡಿಕೇರಿಗೆ ಹೋಗಿದ್ದವು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net