ಮೃತ್ಯುಂಜಯ ನದಿಯಲ್ಲಿ ಮುಳುಗಿದ ಪಿಕಪ್ ವಾಹನ! ಸ್ಥಳೀಯರಿಂದಾಗಿ ಬಚಾವ್​ ಆದ ಡ್ರೈವರ್​, ಕ್ಲೀನರ್​

ಅಅಅಅಅಅಅಅಅಅಅಅಅ
Published on

ಮಂಗಳೂರು: ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಈಗಾಗಲೇ ಮಳೆಯ ಅಬ್ಬರ ಶುರುವಾಗಿದೆ. ಈ ಮಳೆಯಿಂದಾಗಿ ಬೆಳ್ತಂಗಡಿಯ ಮೃತ್ಯುಂಜಯ ನದಿ ನೀರು ಹೆಚ್ಚಾಗಿದ್ದು, ಪಿಕಪ್ ವಾಹನವೊಂದು ನೀರಿನಲ್ಲಿ ಮುಳುಗಿರುವ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದಾಗಿ ಗಾಡಿಯ ಡ್ರೈವರ್​ ಮತ್ತು ಕ್ಲೀನರ್​ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಚಾರ್ಮಾಡಿಯ ಚಿಬಿದ್ರೆಯಲ್ಲಿ ಹರಿಯುವ ಮೃತ್ಯುಂಜಯ ನದಿ ಮೈದುಂಬಿ ಹರಿಯುತ್ತಿದೆ. ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದೆ. ಅದರ ಅರಿವಿರದೆ ಸದಾನಂದ ಎಂಬುವವರಿಗೆ ಸೇರಿದ ಪಿಕಪ್​ ವಾಹನವನ್ನು ನೀರಿಗಿಳಿಸಲಾಗಿದ್ದು, ಗಾಡಿ ನೀರಿನಲ್ಲಿ ಮುಳುಗಲಾರಂಭಿಸಿತ್ತು. ಅಲ್ಲೇ ಹತ್ತಿರದಲ್ಲಿದ್ದ ಜನರು ಅದನ್ನು ಗಮನಿಸಿದ್ದು, ವಾಹವನ್ನು ಮೇಲೆತ್ತಲು ಸಹಾಯ ಮಾಡಿದ್ದಾರೆ. ಸ್ಥಳೀಯರು ಸೂಕ್ತ ಸಮಯಕ್ಕೆ ಸಹಾಯಕ್ಕೆ ಬಂದಿದ್ದರಿಂದಾಗಿ ಗಾಡಿಯಲ್ಲಿದ್ದ ಡ್ರೈವರ್​ ಮತ್ತು ಕ್ಲೀನರ್​ನನ್ನು ಬದುಕುಳಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net