

ಮೂಡುಬಿದಿರೆ: ಶಸ್ತ್ರಚಿಕಿತ್ಸೆ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡಬಲ್ಲದು. ಆದರೆ ನಿಜವಾದ ಸವಾಲು ರೋಗಿಯ ಚೇತರಿಕೆಯಲ್ಲಿ ಕಂಡುಬರುತ್ತದೆ. ಫಿಸಿಯೋಥೆರಪಿಸ್ಟ್‌ಗಳು ಅಂತಹ ಸವಾಲುಗಳನ್ನು ಬಗೆಹರಿಸುವಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ತೇಜಸ್ವಿನಿ ಆಸ್ಪತ್ರೆಯ ಆರ್ಥೋಸ್ಕೊಪಿ ಹಾಗೂ ಸ್ಪೋರ್ಟ್ಸ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುಮಂತ್ ನಾಯಕ್ ಹೇಳಿದರು.
ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಶನಿವಾರ ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ವತಿಯಿಂದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಫಿಸಿಯೋ ಕನೆಕ್ಟ್ 2025 ಉದ್ಘಾಟಿಸಿ ಮಾತನಾಡಿದರು.
ಆಳ್ವಾಸ್ ಹೆಲ್ತ್ ಸೆಂಟರ್‌ನ ಪ್ರಸೂತಿ ತಜ್ಞೆ ಡಾ.ಹನಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಪ್ರಾಧ್ಯಾಪಕ ಡಾ.ಪ್ರಭು ರಾಜ, ಆಕ್ಸ್‌ಫರ್ಡ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ.ವಸಂತನ್, ಚೆನ್ನೈ ಸವಿತ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕ ಡಾ.ಸರವನ್ಕುಮಾರ್ ಜೆ., ಡಾ.ಪರ್ತಿಪನ್ ರಾಮಸ್ವಾಮಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕ್ಷಮಾ ಶೆಟ್ಟಿ ಉಪಸ್ಥಿತರಿದ್ದರು. ಡಾ.ಉಮ್ಮೆ ಸೌದಾ ಕಾರ್ಯಕ್ರಮ ನಿರೂಪಿಸಿದರು.