ಮೂಡಪ್ಪ ಸೇವೆ ಆಮಂತ್ರಣ ಪತ್ರ ಬಿಡುಗಡೆ

6
Published on

ಬಂಟ್ವಾಳ: ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನ, ಬೊಂಡಾಲ ಶ್ರೀಗುರು ಫ್ರೆಂಡ್ಸ್ ಬೆಳ್ಳಿಹಬ್ಬದ ಪ್ರಯುಕ್ತ ಮೇ 9ರಿಂದ 11ರವರೆಗೆ ನಡೆಯಲಿರುವ ಮೂಡಪ್ಪ ಸೇವೆಯ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ ಬೊಂಡಾಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ ಆಮಂತ್ರಣ ಬಿಡುಗಡೆಗೊಳಿಸಿ ಮಾತನಾಡಿ, ಮಹಾಗಣಪತಿ ದೇವರಿಗೆ ಪ್ರೀತಿಯ ಸೇವೆ ಮೂಡಪ್ಪ ಸೇವೆ, ಈ ಸೇವೆಯಲ್ಲಿ ಹೆಚ್ಚಿನ ಜನರು ಭಾಗವಹಿಸುವಂತೆ ತಿಳಿಸಿದರು.

ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ದೇವಸ್ಥಾನ ಅಧ್ಯಕ್ಷ ಜಯರಾಮ ಹೊಳ್ಳ, ಪ್ರಮುಖರಾದ ಈಶ್ವರ ಭಟ್ ಮಾದಕಟ್ಟೆ, ಶಿವಪ್ರಸಾದ್ ಭಟ್, ರಾಜೇಂದ್ರ ಹೊಳ್ಳ, ದಯಾನಂದ್ ಕತ್ತಲ್‌ಸಾರ್, ಕೃಷ್ಣ ಕುಲಾಲ್, ಕರುಣಾಕರ ಕೋಟ್ಯಾನ್, ಪುಷ್ಪರಾಜ್ ಕೋಟ್ಯಾನ್, ಶ್ರೀಧರ ಶೆಟ್ಟಿ, ವಸಂತ ಶೆಟ್ಟಿ, ತಾರನಾಥ ಬಂಗೇರ, ಜಯಲಕ್ಷ್ಮೀ ಪ್ರಭು, ಸುಲೋಚನ ರಮೇಶ್, ದರ್ಶನ್ ಕರ್ಕೇರ, ಲಿಂಗಪ್ಪ ಕರ್ಕೇರ, ಸುಬ್ರಹ್ಮಣ್ಯ ಭಟ್, ಜನಾರ್ದನ ಕುಲಾಲ್, ಶ್ರೀ ಗುರು ಫ್ರೆಂಡ್ಸ್ ಗೌರವಾಧ್ಯಕ್ಷ ಸದಾಶಿವ ಸನಿಲ್, ಅಧ್ಯಕ್ಷ ರಾಜೇಂದ್ರ ಉಪಸ್ಥಿತರಿದ್ದರು. ನಾಗೇಶ್ ಶೆಟ್ಟಿ ಬೊಂಡಾಲ ಕಾರ್ಯಕ್ರಮ ನಿರೂಪಿಸಿದರು. ಶ್ರೀಶಾ ಸನಿಲ್ ಬೊಂಡಾಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net