ಹೃದಯಾಘಾತದಿಂದ ದೈಹಿಕ ಶಿಕ್ಷಕ ಸಾವು

20 NRD-5, Umesh Bail Ganad. (Death)
Published on

ನರಗುಂದ: ದೈಹಿಕ ಶಿಕ್ಷಣ ಶಿಕ್ಷಕರೊಬ್ಬರು ಹೃದಯಾಘಾತದಿಂದ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ.


ಕೊಣ್ಣೂರಿನ ಶ್ರೀವಿದ್ಯಾಚೇತನ ಶಿಕ್ಷಣ ಸಮಿತಿ ಅನುದಾನ ಸಹಿತ ಪ್ರಾಥಮಿಕ ಶಾಲೆ ಶಿಕ್ಷಕ ಉಮೇಶ ಬೈಲಗಾಣದ (42) ಮೃತಪಟ್ಟ ದುರ್ದೈವಿ.

ಭಾನುವಾರ ಶಾಲೆಗೆ ರಜೆ ಇರುವುದರಿಂದ ಎಂದಿನಂತೆ ಬೆಳಗ್ಗೆ ಅಲ್ಪೋಪಹಾರ ಸೇವಿಸಿ ಮನೆ ಹತ್ತಿರದ ಕಟ್ಟೆಯ ಮೇಲೆ ಕುಳಿತಿದ್ದಾಗ ಏಕಾಏಕಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಅವರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net