ಅಕ್ಷರದ ಜ್ಞಾನ ಬಿತ್ತಿದ ಫುಲೆ

3MDG3 SAVITRIBAYI PULE
Published on

ಮುಂಡರಗಿ: ಕೇವಲ ಮಗುವಿಗೆ ಮಾತ್ರ ಅಕ್ಷರ ಕಲಿಸದೆ, ಸಮಾಜಕ್ಕೆ ಅಕ್ಷರ ಜ್ಞಾನ ಬಿತ್ತಿದ ಏಕೈಕ ಮಹಿಳೆ ಸಾವಿತ್ರಿಬಾಯಿ ಫುಲೆ ಎಂದು ಪ್ರಾಚಾರ್ಯ ಎಸ್.ಕೆ. ಚುರ್ಚಿಹಾಳಮಠ ಹೇಳಿದರು.

ಪಟ್ಟಣದ ಪ್ರಿಯದರ್ಶಿನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಣಿವರಿಯದ ಅವರ ಶ್ರಮವನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ಭಾರತದ ಮೊದಲ ಮಹಿಳಾ ಶಿಕ್ಷಕಿ ಎಂದು ಸನ್ಮಾನಿಸಿದ್ದು ಹೆಮ್ಮೆ ವಿಷಯ ಎಂದರು.

ಉಪನ್ಯಾಸಕಿ ಶೈಲಜಾ ಕಲ್ಮಠ ಮಾತನಾಡಿ, ಇಂದಿನ ಹೆಣ್ಣು ಮಕ್ಕಳಿಗೆ ಸಾವಿತ್ರಿಬಾಯಿ ಫುಲೆ ಅವರ ಸಾಧನೆಗಳೇ ಮಾದರಿ. ತುಳಿಯುವ ಜನರು ನಡುವೆ ನಾವು ಹೇಗೆ ಬೆಳೆಯಬೇಕು ಎನ್ನುವುದಕ್ಕೆ ಸಾವಿತ್ರಿಬಾಯಿ ಫುಲೆ ಅವರು ನಮಗೆಲ್ಲ ಆದರ್ಶರಾಗಿದ್ದಾರೆ ಎಂದರು.

ಉಪನ್ಯಾಸಕ ವಿನಯ ಗುಜ್ಜಟ್ಟಿ ಮಾತನಾಡಿದರು. ಉಪನ್ಯಾಸಕರಾದ ಬಿ.ಡಿ. ಉಮಚಗಿ, ಜೀವಣ್ಣವರ, ಶ್ರುತಿ ಅಂಗಡಿ, ಪರಿಮಳ ಅಳಗವಾಡಿ, ಮಲ್ಲೇಶ, ವೀರೇಶ ಕಾಗನೂರ ಇದ್ದರು. ವಿದ್ಯಾರ್ಥಿಗಳಾದ ಹೆಬ್ಬಾಳ ಶೋಭಾ ಪ್ರಾರ್ಥಿಸಿದರು. ಅನಿತಾ ನಿರೂಪಿಸಿದರು. ಭೀಮರಡ್ಡಿ ಸ್ವಾಗತಿಸಿದರು. ಶ್ರೀಲಕ್ಷ್ಮೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net