PHOTOS: ನಿದ್ದೆ ಮಂಪರಿನಲ್ಲಿ ಗಾಡಿ ಓಡಿಸಿದ ಚಾಲಕ: ಮನೆಯೊಳಗೆ ನುಗ್ಗಿ ಪಲ್ಟಿ ಹೊಡೆಯಿತು ತರಕಾರಿ ಸಾಗಾಟದ ವಾಹನ

Kushalanagara Basavanahalli accident Feature Photo 18 APR 20
Published on

ಕೊಡಗು: ಚಾಲಕ ನಿದ್ದೆ ಮಂಪರಿನಲ್ಲಿ ಡ್ರೈವಿಂಗ್ ಮಾಡಿದ ಕಾರಣ ತರಕಾರಿ ಸಾಗಾಟದ ಪಿಕ್​ಅಪ್ ಮನೆಯೊಳಕ್ಕೆ ನುಗ್ಗಿ ಮಗುಚಿಬಿದ್ದ ಘಟನೆ ಕೊಡಗು ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 4 ಗಂಟೆಗೆ ನಡೆದಿದೆ. ಕುಶಾಲನಗರ ಸಮೀಪದ ಬಸವನಹಳ್ಳಿ ಎಂಬಲ್ಲಿ ಈ ದುರಂತ ಸಂಭವಿಸಿದೆ.

ತರಕಾರಿ ತುಂಬಿಕೊಂಡು ಕುಶಾಲನಗರದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದಾಗ ಬಸವನಹಳ್ಳಿಯಲ್ಲಿ ಚಾಲಕ ಕುಮಾರ್​ಗೆ ನಿದ್ದೆ ಮಂಪರು ಕವಿದಿದೆ. ಆಗ ವಾಹನ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಇದ್ದ ಮನೆಯ ಎದುರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದು ಮನೆಯೊಳಕ್ಕೆ ನುಗ್ಗಿ ಪಲ್ಟಿ ಹೊಡೆದಿದೆ.

ಧರ್ಮ ಎಂಬವವರ ಮನೆ ಅದಾಗಿದ್ದು, ಅವರ ಮನೆ ಮತ್ತು ಕಾರಿಗೂ ಹಾನಿಯಾಗಿದೆ. ಚಾಲಕ ಕುಮಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net