ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ಒದಗಿಸಿ

22 HBH 01
ಹಗರಿಬೊಮ್ಮನಹಳ್ಳಿಯಲ್ಲಿ ಕಾರ್ಯನಿರತ ಛಾಯಾಗ್ರಾಹಕರು ತಾಲೂಕು ಆಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಭಾರತಿ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಕಾರ್ಯದರ್ಶಿ ಕೆ.ವೀರೇಶ, ಪ್ರಮುಖರಾದ ಯುವರಾಜ ಗಡ್ಡಿ, ವಿಶ್ವನಾಥ ಹಿರಾಳು, ಮಾಲವಿ ಜಗದೀಶ, ಲೋಕ್ಯಾನಾಯ್ಕ, ಪೀರ‌್ಯಾನಾಯ್ಕ, ಲವ, ರಾಜು ಹಂಪಾಪಟ್ಟಣ, ಎಚ್.ಎಂ.ರಾಜಶೇಖರಯ್ಯ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ವೃತ್ತಿಪರ ಛಾಯಾಗ್ರಾಹಕರ ಮೇಲೆ ನಡೆಯುತ್ತಿರುವ ಹಲ್ಲೆ ಮತ್ತು ದೌರ್ಜನ್ಯ ಖಂಡಿಸಿ ತಾಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ತಾಲೂಕು ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಭಾರತಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಸಂಘದ ಗೌರವ ಅಧ್ಯಕ್ಷ ಕೆ.ರಾಮಣ್ಣ ಮಾತನಾಡಿ, ಬೆಂಗಳೂರಿನ ಶಿವಾಜಿನಗರದ ಕಲ್ಯಾಣ ಮಂಟಪದಲ್ಲಿ ಕಾರ್ಯನಿರತ ಛಾಯಾಗ್ರಾಹಕನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಕ್ಯಾಮೆರಾ ಸಲಕರಣೆಗಳನ್ನು ಹಾನಿ ಮಾಡಿರುವುದು ಛಾಯಾಗ್ರಾಹಕರ ವಲಯದಲ್ಲಿ ಆತಂಕ ಮೂಡಿಸಿದೆ.

ಬಹುತೇಕ ಛಾಯಾಗ್ರಾಹಕರು ವೃತ್ತಿಯನ್ನೇ ಅವಲಂಬಿಸಿ ಕುಟುಂಬಗಳನ್ನು ನಿರ್ವಹಿಸುತ್ತಿದ್ದಾರೆ. ಕಾರ್ಯನಿರತ ಛಾಯಾಗ್ರಾಹಕರ ಮೇಲೆ ಏಕಾಏಕಿ ಹಲ್ಲೆ ಮಾಡುವುದು ಮತ್ತು ದೌರ್ಜನ್ಯದಂತಹ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಛಾಯಾಗ್ರಾಹಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಹಲ್ಲೆಯಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.

ತಾಲೂಕು ಅಧ್ಯಕ್ಷ ಎಚ್.ಎಂ.ರಾಘವೇಂದ್ರ ಮಾತನಾಡಿ, ಶಿವಾಜಿನಗರದ ಪ್ರಕರಣ ತೀರಾ ಅಮಾನುಷ ಕೃತ್ಯವಾಗಿದೆ. ೆಟೋಗ್ರಾಫರ್‌ಗಳ ವೃತ್ತಿಯಲ್ಲಿರುವವರಿಗೆ ರಕ್ಷಣೆ ಅಗತ್ಯವಿದೆ. ಜಿಲ್ಲಾಧಿಕಾರಿಗಳು ಎಲ್ಲಾ ಛಾಯಾಗ್ರಾಹಕರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದರು. ಕೆ.ರಾಮಣ್ಣ, ಎಚ್.ಎಂ.ರಾಘವೇಂದ್ರ, ಕೆ.ವೀರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net