More

    ಛಾಯಾಗ್ರಾಹಕನ ಮೇಲೆ ಹಲ್ಲೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ

    ವಿಜಯವಾಣಿ ಸುದ್ದಿಜಾಲ ಗದಗ
    ಬೆಂಗಳೂರಿನ ವೃತ್ತಿನಿರತ ಛಾಯಾಗ್ರಾಹಕನ ಮೇಲೆ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಛಾಯಾಗ್ರಾಹಕರ ೇಮಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸಂದ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
    ಮನವಿ ಸಲ್ಲಿಸಿ ಮಾತನಾಡಿದ ಸಂದ ಜಿಲ್ಲಾಧ್ಯ ಪವನ ಮೇಹರವಾಡೆ, ಬೆಂಗಳೂರಿನ ಶಿವಾಜಿನಗರದ ಶಮ್ಸ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭದ ವಿಡಿಯೋ ಚೀತ್ರಿಕರಿಸಲು ಹೋಗಿದ್ದ ಛಾಯಾಗ್ರಾಹಕನ ಮೇಲೆ ುಲಕ ಕಾರಣಕ್ಕೆ ಮದುವೆ ಸಮಾರಂಭದಲ್ಲಿದ್ದ ಕೆಲವರು ಹಲ್ಲೆ ನಡೆಸಿದ್ದಾರೆ. ಜೀವನ ನಿರ್ವಹಣೆಗೆ ಚೀತ್ರಿಕರಿಸ ವೃತ್ತಿ ಮಾಡುವ ಛಾಯಾಗ್ರಾಹಕನ ಮೇಲೆ ಹಲ್ಲೆ ಮಾಡಿರುವುದು ಅವಮಾನವೀಯ ಟನೆ. ಇದರಿಂದಾಗಿ ಛಾಯಗ್ರಾಹಕರಿಗೆ ರಣೆ ಇಲ್ಲ ಎನ್ನುವುದು ಸಾಬೀತಾಗಿದೆ. ಈ ಬಗ್ಗೆ ರಾಜ್ಯ ಛಾಯಾಗ್ರಾಹಕರ ಸಂದ ಅಧ್ಯರು ಹಲ್ಲೆ ನಡೆಸಿದವರ ಮೇಲೆ ಪೊಲೀಸರಿಗೆ ದೂರು ನೀಡಿದ್ದಾರೆ ಈ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವೃತ್ತಿನಿರತ ಛಾಯಾಗ್ರಾಹಕರಿಗೆ ಸೂಕ್ತ ರಣೆ ದೊರೆಯಬೇಕು. ಹಲ್ಲೆಗೊಳಗಾಗಿರುವ ಛಾಯಾಗ್ರಾಹಕರಿಗೆ ಸರ್ಕಾರ ಪರಿಹಾರ ನೀಡಬೇಕು. ಇಂತಹ ಪ್ರಕರಣಗಳು ರಾಜ್ಯದಲ್ಲಿ ಮರುಕಳಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.
    ಮಹಾದೇವಗೌಡ್ರ ಸಂಕನಗೌಡ್ರ, ಚನ್ನಪ್ಪ ಬ್ಯಾಹಟ್ಟಿ, ರಾಜು ಬಾಕಳೆ, ವಿನಾಯಕ, ಸಂತೋಷ ನಾವಳ್ಳಿ, ಕೊಟ್ರೇಶ ಕುಂದ್ರಳ್ಳಿ, ಕುಮಾರ ನಾಗನೂರು, ಶರಣು ಉಪ್ಪಿನ, ಎಂ. ಎಸ್​. ಸಂಕನಗೌಡ್ರ, ಸಂತೋಷ ಗೋಕಾವಿ, ಮುತ್ತು ಹುಲಕೋಟಿ, ಪ್ರಕಾಶ ವಸ್ತ್ರದ, ರಾಮು ವಗ್ಗಿ, ಕೊಟ್ರೇಶ ಅಕ್ಕಿ, ಪ್ರಜ್ವಲ್​ ಸ್ಥಾವರದ, ದೇವ ಪವಾರ ಹಲವರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts