ಫೋನ್​ ಟ್ಯಾಪಿಂಗ್​ ಆಗ್ತಿರೋದು ಸತ್ಯ, ಕೇಂದ್ರಕ್ಕೆ ಪತ್ರ ಬರೆಯುವೆ; ಸಂಸದ ಡಿ.ಕೆ.ಸುರೇಶ್

DK Suresh 22 April 20
Published on

ಬೆಂಗಳೂರು: ಫೋನ್​ ಟ್ಯಾಪಿಂಗ್​ ಆರೋಪವಲ್ಲ, ಸತ್ಯ. ಕಳೆದ 15 ದಿನಗಳಿಂದ ಕರೆ ದೂರವಾಣಿಯಲ್ಲಿ ಮಾತನಾಡುವಾಗ ಅಡಚಣೆ ಆಗುತ್ತಿದೆ. ಈ ಸಂಬಂಧ ದೂರು ನೀಡಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್​ ಹೇಳಿದ್ದಾರೆ.

'ನನ್ನ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆರೋಪಿಸಿದ್ದರು. ಈ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸುರೇಶ್, ಫೋನ್​ ಟ್ಯಾಪಿಂಗ್​ನಲ್ಲಿ ಬಿಜೆಪಿಯವರು ಎಕ್ಸ್​ಪರ್ಟ್​. ಒಂದು ಪಕ್ಷದ ಅಧ್ಯಕ್ಷರು ಇದನ್ನು ಗಂಭೀರವಾಗಿ ಮಾಡಿದ್ದಾರೆ. ರಾಜ್ಯ ಸರ್ಕಾರ ಮೊದಲು ಈ ಪ್ರಕರಣವನ್ನು ಪರಿಗಣಿಸಬೇಕು. ಇಲ್ಲವಾದರೆ ನಾನೇ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಎಚ್ಚರಿಸಿದರು.

‘ನನ್ನ ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆರೋಪಿಸಿದ್ದರು. ಈ ಮಾತಿಗೆ ಧ್ವನಿಗೂಡಿಸಿರುವ ಅವರ ಸಹೋದರ ಡಿ.ಕೆ. ಸುರೇಶ್​, ಫೋನ್​ ಟ್ಯಾಪಿಂಗ್​ ಆರೋಪವಲ್ಲ, ಸತ್ಯ ಎಂದಿದ್ದಾರೆ.

ಡಿಜೆ ಹಳ್ಳಿ ಪ್ರಕರಣದಲ್ಲಿ ಗುಪ್ತಚರ ಇಲಾಖೆ ವೈಫಲ್ಯವಿದೆ. ಅದನ್ನ ಸರ್ಕಾರ ಒಪ್ಪಿಕೊಳ್ಳಬೇಕು. ಅದನ್ನು ಬಿಟ್ಟು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್​ ಮೇಲೆ ಗೂಬೆ ಕೂರಿಸುವ ಕೆಲಸ ನಡೆಯುತ್ತಿದೆ ಎಂದು ಸುರೇಶ್​ ವಾಗ್ದಾಳಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net