

ಹೆಬ್ರಿ: ಅಖಿಲ ಭಾರತ ಮಾಧ್ವ ಮಹಾಮಂಡಲದ 30ನೇ ತತ್ವಜ್ಞಾನ ಸಮ್ಮೇಳನ ಪೆರಣಂಕಿಲ - 2025ರ ಪೂರ್ವಭಾವಿಯಾಗಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಶ್ರೀಗಳ ಸಂಕಲ್ಪದಂತೆ 108 ತತ್ವಜ್ಞಾನ ಮಹೋತ್ಸವ ಪ್ರಯುಕ್ತ ಎಳ್ಳಾರೆ ಶ್ರೀ ಲಕ್ಷ್ಮೀಜನಾರ್ದನ ದೇವರ ಸನ್ನಿಧಿಯಲ್ಲಿ ತತ್ವಜ್ಞಾನ ಮಹೋತ್ಸವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಎಚ್.ಸತ್ಯನಾರಾಯಣ ಮಾತನಾಡಿದರು. ಅಜೆಕಾರು -ಎಳ್ಳಾರೆ ವಿಪ್ರ ಬಾಂಧವರಿಂದ ವಿಷ್ಣುಸಹಸ್ರನಾಮ, ಸಂಕೀರ್ತನೆ ನಡೆಯಿತು. ಕುಕ್ಕಿಕಟ್ಟೆ ರಾಮಕೃಷ್ಣ ಸ್ವಾಗತಿಸಿದರು. ಯೋಗೀಶ ಮಲ್ಯ, ಕೃಷ್ಣ ಭಟ್, ರಾಘವೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.