ಕಬ್ಬಿನಾಲೆ ನಾಗದೇವರಿಗೆ ಅನುಜ್ಞಾಕಳಶ

anujna
Published on

ಹೆಬ್ರಿ: ಕಬ್ಬಿನಾಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾಗದೇವರ ಜೀರ್ಣೋದ್ಧಾರ ಅಂಗವಾಗಿ ನಾಗದೇವರಿಗೆ ಅನುಜ್ಞಾಕಳಶ, ಸಂಕೋಚವಿಧಾನಗಳು, ನೂತನ ಬಿಂಬಗಳ ಶಿಲಾ ಜಲದಿವಾಸ, ಪೂಜೆ ಭಾನುವಾರ ನಡೆಯಿತು. ಕೆ.ಎಸ್.ರಾಮಕೃಷ್ಣ ತಂತ್ರಿ ಮಾರ್ಗದರ್ಶನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಅರ್ಚಕರಾದ ಲಕ್ಷ್ಮೀಶ ಭಾರದ್ವಾಜ್, ನಾರಾಯಣ ಭಟ್, ದೇವಸ್ಥಾನ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ಸದಸ್ಯರಾದ ಕೆ.ನಾರಾಯಣ ಭಟ್, ಚಂದ್ರಶೇಖರ ಬಾಯಾರಿ, ಯೋಗೀಂದ್ರ ಹೆಬ್ಬಾರ್, ಸದಾಶಿವ ಶೆಟ್ಟಿ, ಜಗದೀಶ ಪೂಜಾರಿ, ಶೇಖರ್ ಗೌಡ, ರೇಣುಕ ಶೆಟ್ಟಿಗಾರ್, ಗಾಯತ್ರಿ ಮಡಿವಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net