ವೈದ್ಯವಿದ್ಯಾರ್ಥಿಗಳಿಂದ ವಿಕ್ಟೋರಿಯಾ ಆವರಣದಲ್ಲಿ ಮೋಂಬತ್ತಿ ಮೆರವಣಿಗೆ

Candel march - 2
Published on

ಬೆಂಗಳೂರು: ಸ್ಟೈಂಡ್ ಹೆಚ್ಚಳಕ್ಕೆ ಆಗ್ರಹಿಸಿ ಸೇವೆ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸುತ್ತಿರುವ ವೈದ್ಯ ವಿದ್ಯಾರ್ಥಿಗಳು ಗುರುವಾರ ಸಂಜೆ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮೋಂಬತ್ತಿ ಬೆಳಗಿಸುವ ಮೂಲಕ ವೈದ್ಯರ ರಕ್ಷಣೆ ಮಾಡುವಂತೆ ಸರ್ಕಾರವನ್ನು ಆಗ್ರಹಿಸಿದರು.

ಕೋಲ್ಕೊತಾದ ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಭಾಂಗಣದಲ್ಲಿಯೇ ತರಬೇತಿನಿರತ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ಕೊಲೆ ಮಾಡಿರುವ ಕೃತ್ಯವನ್ನು ಖಂಡಿಸಿದರು. ಇದೇ ವೇಳೆ ಕೊಲೆಗೆ ಕಾರಣರಾದವನ್ನು ಕೂಡಲೇ ಬಂಧಿಸಬೇಕು. ಇಲ್ಲವೇ ಪ್ರಕರಣವನ್ನು ತಕ್ಷಣ ಸಿಬಿಐಗೆ ವಹಿಸಬೇಕು. ಇದರ ಜತೆಗೆ ವೈದ್ಯರೂ ಸೇರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬ್ಬಂದಿ ರಕ್ಷಣಗೆ ಸರ್ಕಾರ ಸೂಕ್ತ ಹಾಗೂ ಕಠಿಣ ಕಾನೂನು ಜಾರಿಗೊಳಿಸಬೇಕು ಎಂದು ಪ್ರತಿಭಟನಾ ನಿರತ ವೈದ್ಯರು ಒತ್ತಾಯಿಸಿದರು.

ಜೀವ ಉಳಿಸುವ ವೈದ್ಯರನ್ನು ರಕ್ಷಿಸಿ ಎಂಬ ಘೋಷಣಾ ಫಲವನ್ನು ಹಿಡಿದು ಮನವಿ ಮಾಡಿದರು. ಮೋಂಬತ್ತಿ ಹಿಡಿದು ಆಸ್ಪತ್ರೆ ಆವರಣದಲ್ಲಿ ಮೆರವಣಿಗೆ ಮಾಡುವ ಮೂಲಕ ಮೃತ ವೈದ್ಯೆಗೆ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net