ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ? ಕಾರ್ವಿುಕರ ಕಲ್ಯಾಣ ಯೋಜನೆಗೆ ಇಂಧನ ಸೆಸ್ ವಿಧಿಸಲು ಸರ್ಕಾರ ಚಿಂತನೆ

Oil Price
Published on

| ರುದ್ರಣ್ಣ ಹರ್ತಿಕೋಟೆ ಬೆಳಗಾವಿ

ರಾಜ್ಯದಲ್ಲಿರುವ ಕೋಟ್ಯಂತರ ಅಸಂಘಟಿತ ಕಾರ್ವಿುಕರಿಗೆ ವಿವಿಧ ಸೌಲಭ್ಯಗಳನ್ನು ನೀಡುವುದಕ್ಕೆ ಅಗತ್ಯವಾದ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸುವುದಕ್ಕೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಅಸಂಘಟಿತ ಕಾರ್ವಿುಕರ ವಿವಿಧ ಸೌಲಭ್ಯಗಳ ಬೇಡಿಕೆ ಈಡೇರಿಸಲು ಕಾರ್ವಿುಕ ಇಲಾಖೆಯ ಮೇಲೆ ಒತ್ತಡವಿದೆ. ಸಾಕಷ್ಟು ಹೋರಾಟಗಳು ನಡೆದಿವೆ. ಹಾಗಾಗಿ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಅಗತ್ಯ ಸಂಪನ್ಮೂಲ ಹೊಂದಿಸಿಕೊಳ್ಳಲು ಸರ್ಕಾರ ಇಂಧನದ ಮೇಲೆ ಸೆಸ್ ಹಾಕುವ ವಿಚಾರ ಮುನ್ನೆಲೆಗೆ ಬಂದಿದೆ. ಗ್ಯಾರಂಟಿಗಳಿಗಾಗಿ ಕೋಟ್ಯಂತರ ರೂ.ಗಳನ್ನು ಭರಿಸುತ್ತಿರುವುದರಿಂದ ಹೆಚ್ಚುವರಿಯಾಗಿ ಯಾವುದೇ ಆರ್ಥಿಕ ಹೊರೆಯನ್ನು ಹೊರುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ.

ಸರ್ಕಾರದ ಉದ್ದೇಶವೇನು?: ಅಸಂಘಟಿತ ಕಾರ್ವಿುಕರಿಗೆ 25 ಲಕ್ಷ ರೂ. ಗಳ ತನಕ ಆರೋಗ್ಯ ವಿಮೆ, ಗುಂಪು ವಿಮೆ, ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ಹೀಗೆ ವಿವಿಧ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಉದ್ದೇಶವಾಗಿದೆ. ಮುಂದಿನ ದಿನಗಳಲ್ಲಿ ಸಾಮಾಜಿಕ ಭದ್ರತೆ ಒದಗಿಸುವುದು ಕಾರ್ವಿುಕ ಇಲಾಖೆಯ ಉದ್ದೇಶವಾಗಿದೆ.

ಎಷ್ಟು ಹೆಚ್ಚಳ?

ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 50 ಪೈಸೆಯಿಂದ ಒಂದು ರೂ. ತನಕ ಹೆಚ್ಚಳಕ್ಕೆ ಸರ್ಕಾರ ಚಿಂತನೆ ನಡೆಸಿದೆ. ಒಂದು ರೂ. ಹೆಚ್ಚಳವಾದರೆ ವರ್ಷಕ್ಕೆ 2,200 ಕೋಟಿ ರೂ.ಗಳಷ್ಟು ಸಂಗ್ರಹವಾಗಲಿದೆ. ಇಷ್ಟು ಮೊತ್ತ ಸಂಗ್ರಹವಾದರೆ ಸಾಮಾಜಿಕ ಭದ್ರತೆಗೂ ಅವಕಾಶ ಕಲ್ಪಿಸುವುದು ಕಾರ್ವಿುಕ ಇಲಾಖೆಯ ಚಿಂತನೆಯಾಗಿದೆ.

ಮುಖ್ಯಮಂತ್ರಿಗೆ ಸಲ್ಲಿಕೆಯಾಗಲಿದೆ ಪ್ರಸ್ತಾವನೆ

ಕಾರ್ವಿುಕ ಸಚಿವ ಸಂತೋಷ್ ಎಸ್. ಲಾಡ್ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದ್ದಾರೆ. ಸದ್ಯದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಲಿದ್ದಾರೆ. ಸಿಎಂ ಸಮ್ಮತಿಸಿದರೆ ಮುಂದಿನ ಬಜೆಟ್​ನಲ್ಲಿ ಈ ಹೆಚ್ಚಳ ಘೋಷಣೆಯಾಗುವ ನಿರೀಕ್ಷೆ ಇದೆ.

ಯಾರು ಅಸಂಘಟಿತ ಕಾರ್ವಿುಕರು?

ಬೀದಿಬದಿ ವ್ಯಾಪಾರಿಗಳು, ಮನೆ ಕೆಲಸದ ಕಾರ್ವಿುಕರು, ಮಧ್ಯಾಹ್ನದ ಬಿಸಿಯೂಟ ತಯಾರಕರು, ಇಟ್ಟಿಗೆ ಕಾರ್ವಿುಕರು, ಕಮ್ಮಾರರು, ಚಿಂದಿ ಆಯುವವರು, ಎಲೆಕ್ಟ್ರಿಕ್ ಕೆಲಸ ಮಾಡುವವರು, ಮಡಿವಾಳರು, ಸವಿತಾ ಸಮಾಜ, ಟೈಲರ್​ಗಳು, ಭೂರಹಿತ ಕಾರ್ವಿುಕರು ಹೀಗೆ 42 ರೀತಿಯ ಕಾರ್ವಿುಕರನ್ನು ಅಸಂಘಟಿತರೆಂದು ಗುರುತಿಸಲಾಗಿದೆ.

ಮೆಟ್ರೋಗಾಗಿ ಸೆಸ್

ಬೆಂಗಳೂರಿನ ಮೆಟ್ರೋ ಯೋಜನೆಗಾಗಿ ಸಂಪ ನ್ಮೂಲ ಕ್ರೋಡೀಕರಣಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ಹಾಕಲಾಗಿತ್ತು. 1994 ರಲ್ಲಿ ಪ್ರತಿ ಲೀಟರ್ ಮೇಲೆ 25 ಪೈಸೆ ಸೆಸ್ ಹಾಕುವ ನಿರ್ಧಾರಕ್ಕೆ ತೆಗೆದುಕೊಳ್ಳಲಾಗಿತ್ತು.

ಉಪಕರಕ್ಕೆ ಕಾರಣವೇನು

ಸರ್ಕಾರ ಕಟ್ಟಡ ಕಾರ್ವಿುಕರಿಗೆ ಪ್ರತ್ಯೇಕ ಕಾರ್ವಿುಕ ಮಂಡಳಿಯನ್ನೇ ರಚನೆ ಮಾಡಿದೆ. ಪ್ರತಿಯೊಂದು ಅಸಂಘಟಿತ ಕಾರ್ವಿುಕ ವರ್ಗಕ್ಕೆ ಪ್ರತ್ಯೇಕ ಮಂಡಳಿಗಳ ರಚನೆ ಮಾಡುವುದು ಸಾಧ್ಯವಾಗದು, ಏಕೆಂದರೆ ವಂತಿಕೆ ಬರುವುದಿಲ್ಲ. ಆದ್ದರಿಂದ, ಸರ್ಕಾರದಿಂದಲೇ ನೆರವು ನೀಡುವುದು ಒಟ್ಟಾರೆ ಉದ್ದೇಶವಾಗಿದೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸೆಸ್ ವಿಧಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಮುಖ್ಯಮಂತ್ರಿ ಒಪ್ಪಿದ ನಂತರ ಸಚಿವ ಸಂಪುಟದ ಮುಂದೆ ವಿಷಯ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ. ಪ್ರತಿ ಲೀಟರ್​ಗೆ 1 ರೂ. ಸೆಸ್ ಹಾಕಿದರೆ 2,200 ಕೋಟಿ ರೂ.ಗಳ ಸಂಗ್ರಹವಾಗುವ ನಿರೀಕ್ಷೆ ಇದೆ.

| ಸಂತೋಷ್ ಎಸ್. ಲಾಡ್ ಕಾರ್ವಿುಕ ಸಚಿವ

ಪೆಟ್ರೋಲ್, ಡೀಸೆಲ್ ಮೇಲೆ ಎಷ್ಟಿದೆ ತೆರಿಗೆ?

ಕರ್ನಾಟಕ ಮಾರಾಟ ತೆರಿಗೆ ಪೆಟ್ರೋಲ್ ಮೇಲೆ ಶೇ.25.94 ಹಾಗೂ ಡೀಸೆಲ್ ಮೇಲೆ ಶೇ.14.34 ರಷ್ಟು ಇದೆ. ಅದೇ ರೀತಿಯಲ್ಲಿ ಕೇಂದ್ರ ಅಬಕಾರಿ ತೆರಿಗೆ ಪೆಟ್ರೋಲ್ ಮೇಲೆ ಪ್ರತಿ ಲೀಟರ್​ಗೆ 8.40 ರೂ. ಹಾಗೂ ಡೀಸೆಲ್ ಮೇಲೆ ಪ್ರತಿ ಲೀಟರ್​ಗೆ 14.80 ರೂ. ಪಡೆಯಲಾಗುತ್ತಿದೆ.

Oil 1

ಸಾರ್ವಜನಿಕ ವಿರೋಧದ ಭಯ

ಈಗಾಗಲೇ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ಇದೆ. ಇಂತಹ ಸಂದರ್ಭದಲ್ಲಿ ಮತ್ತೆ ಹೆಚ್ಚಳ ಮಾಡಿದರೆ ಸಾರ್ವಜನಿಕ ವಿರೋಧದ ಭೀತಿಯೂ ಸರ್ಕಾರಕ್ಕಿದೆ. ಲೋಕಸಭಾ ಚುನಾವಣೆ ಎದುರಾಗುವುದರಿಂದ ಸಿಎಂ ಒಪು್ಪವರೇ ಎಂಬ ಪ್ರಶ್ನೆಯೂ ಕಾರ್ವಿುಕ ಇಲಾಖೆಯನ್ನು ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net