

ಬೆಂಗಳೂರು: ಹಾಸನದಲ್ಲಿ ಯಾರ್ಡ್ ಪುನರ್ ನಿರ್ಮಾಣ ಕಾಮಗಾರಿ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಡಿ.14 ರಿಂದ ಡಿ.22 ರವರೆಗೆ 22 ರೈಲು ಸೇವೆಯನ್ನು ರದ್ದುಗೊಳಿಸಿರುವುದಾಗಿ ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಡಿ.14 ರಿಂದ ಡಿ.22ರವರೆಗೆ ಮೈಸೂರು - ಅರಸಿಕೆರೆ (06214), ಅರಿಸಿಕೆರೆ -ಮೈಸೂರು (06213), ಯಶವಂತಪುರ - ಮೈಸೂರು (16207), ಮೈಸೂರು - ಯಶವಂತಪುರ (16208), ಮೈಸೂರು -ತಾಳಗುಪ್ಪ (16222), ಮೈಸೂರು -ಅರಸಿಕೆರೆ (06268), ಅರಿಸಿಕೆರೆ -ಮೈಸೂರು (06267), ಮೈಸೂರು -ಸರ್.ಎಂ.ವಿ. ಬೆಂಗಳೂರು (06269) ರೈಲನ್ನು ರದ್ದುಗೊಳಿಸಲಾಗಿದೆ.
ಡಿ.15 ರಿಂದ ಡಿ.23ರವರೆಗೆ ತಾಳಗುಪ್ಪ - ಮೈಸೂರು ( 16221), ಡಿ.16 ರಿಂದ ಡಿ.20ರವರೆಗೆ ಕೆಎಸ್‌ಆರ್ ಬೆಂಗಳೂರು - ಕಣ್ಣೂರು (16511), ಡಿ 17 ರಿಂದ ಡಿ.21ರವರೆಗೆಗೆ ಕಣ್ಣೂರು - ಕೆಎಸ್‌ಆರ್ ಬೆಂಗಳೂರು (16512), ಡಿ. 16 ರಿಂದ ಡಿ.20ರವರೆಗೆ ಕೆಎಸ್‌ಆರ್ ಬೆಂಗಳೂರು - ಕಾರವಾರ (16595), ಡಿ.17ರಿಂದ ಡಿ.21ರವರೆಗೆ ಕಾರವಾರ - ಬೆಂಗಳೂರು (16596), ಡಿ.13ರಿಂದ ಡಿ.21ರವೆಗೆ ಎಸ್‌ಎಂವಿಟಿ ಬೆಂಗಳೂರು -ಮೈಸೂರು (16270) ರದ್ದುಗೊಳಿಸಲಾಗಿದೆ.
ಡಿ.16ರಂದು ಯಶವಂತಪುರ - ಮಂಗಳೂರು ಜಂಕ್ಷನ್ (16539), ಡಿ.17 ರಂದು ಮಂಗಳೂರು ಜಂಕ್ಷನ್ - ಯಶವಂತಪುರ (16540) ರೈಲು ಸಂಚಾರ ಇರುವುದಿಲ್ಲ.
ಡಿ. 14,17, 19 ಮತ್ತು 21ರಂದು ಯಶವಂತಪುರ - ಮಂಗಳೂರು ಜಂಕ್ಷನ್ (16575 ) ಹಾಗೂ ಡಿ.15, 18, 20 ಮತ್ತು 22ರಂದು ಮಂಗಳೂರು ಜಂಕ್ಷನ್ - ಯಶವಂತಪುರ (16576) ರೈಲು ರದ್ದುಗೊಳಿಸಲಾಗಿದೆ.
ಯಶವಂತಪುರ - ಕಾರವಾರ ನಡುವೆ ಸಂಚರಿಸುವ (16515) ರೈಲನ್ನು ಡಿ.13, 15, 18, 20 ಮತ್ತು 22ರಂದು ರದ್ದುಗೊಳಿಸಲಾಗಿದೆ. ಕಾರವಾರ - ಯಶವಂತಪುರ ನಡುವೆ ಸಂಚರಿಸುವ (16516) ರೈಲನ್ನು ಡಿ.14, 16, 19, 21 ಹಾಗೂ 23 ರಂದು ಸಂಚಾರ ರದ್ದುಗೊಳಿಸಲಾಗಿದೆ.
ಯಶವಂತಪುರ - ಸೇಲಮ್ ಎಕ್ಸ್ಪ್ರೆಸ್ (16211) ರೈಲು ಡಿ.14 ರಿಂದ ಡಿ.19ರ ವರೆಗೆ ಸ್ಥಗಿತಗೊಳ್ಳಲಿದೆ. ಸೇಲಮ್ - ಯಶವಂತಪುರ (16211) ರೈಲು ಡಿ.15 ರಿಂದ ಡಿ.20ರ ವರೆಗೆ ರದ್ದುಗೊಂಡಿದೆ.