ಸಾಣೂರು ದೇವಸ್ಥಾನದಲ್ಲಿ ಮನವಿ ಪತ್ರ ಬಿಡುಗಡೆ

blm-1
Published on

ಕಾರ್ಕಳ: ಸಾಣೂರು ದೆಂದಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.23ರಿಂದ ಮೇ 5ರವರೆಗೆ ನಡೆಯಲಿರುವ ಜೀರ್ಣೋದ್ಧಾರ ಅಷ್ಟಬಂಧ ಬ್ರಹ್ಮಕಲಶೋತ್ಸವದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಕ್ಷೇತ್ರದಲ್ಲಿ ಇತ್ತೀಚೆಗೆ ಜರುಗಿತು.

ಕ್ಷೇತ್ರ ಪ್ರಧಾನ ಅರ್ಚಕ ಶ್ರೀರಾಮ್ ಭಟ್ ಮನವಿ ಪತ್ರ ಬಿಡುಗಡೆಗೊಳಿಸಿದರು. ಜೀರ್ಣೋದ್ಧಾರ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾತ್ ನಾಯ್ಕ ಸಾಣೂರು ಗುತ್ತು, ಸ್ವಾಗತ ಸಮಿತಿ ಸಂಚಾಲಕ, ಸಾಣೂರು ಗ್ರಾಪಂ ಅಧ್ಯಕ್ಷ ಯುವರಾಜ್ ಜೈನ್, ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ಪಮ್ಮನಾಡಿ ಗುತ್ತು, ಸಂಘಟನಾ ಕಾರ್ಯದರ್ಶಿ ಜಗದೀಶ್ ಪೂಜಾರಿ ಸೇಣರಬೆಟ್ಟು, ಸಾಣೂರು ನರಸಿಂಹ ಕಾಮತ್, ವಿವಿಧ ಸಮಿತಿ ಸಂಚಾಲಕರಾದ ವಿಶ್ವನಾಥ್ ಶೆಟ್ಟಿ ಭಾಮಿನಿ ಏರ್ನಡ್ಕಗುತ್ತು, ಕೊರಗ ಶೆಟ್ಟಿ ಕಾಂದೋಟ್ಟು, ಪ್ರಸಾದ್ ಶೆಟ್ಟಿ, ಪ್ರವೀಣ್ ಕೋಟ್ಯಾನ್, ಸುಧಾಕರ್ ಇಂದಿರಾನಗರ, ರವಿ ಪೂಜಾರಿ, ಪುರುಷೋತ್ತಮ್ ಗೌಡ, ಜಗದೀಶ್ ಕುಮಾರ್, ಸಾಧು ನಾಯ್ಕ, ಸುಭಾಸ್ ಪೂಜಾರಿ, ಮಹೇಶ್ ಶೆಟ್ಟಿ, ರಾಜೇಶ್ ಇಂದಿರಾನಗರ, ಮಹೇಶ್ ಶೆಟ್ಟಿ, ಸದಾಶಿವ ಶೆಟ್ಟಿ, ವಿವಿಧ ಸಮಿತಿ ಸಹ ಸಂಚಾಲಕರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಎಸ್.ಕೋಟ್ಯಾನ್ ಸ್ವಾಗತಿಸಿದರು. ಮಾಧ್ಯಮ ಮತ್ತು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net