

ಗಂಗೊಳ್ಳಿ: ಕೆಥೊಲಿಕ್ ಸಭಾ ಗಂಗೊಳ್ಳಿ ಘಟಕ ಆಶ್ರಯದಲ್ಲಿ ಚರ್ಚ್ ಆರೋಗ್ಯ ಆಯೋಗ, ಗುರುಜ್ಯೋತಿ ಸ್ಪೋರ್ಟ್ಸ್ ಕ್ಲಬ್, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಸಹಯೋಗದೊಂದಿಗೆ ಕುಂದಾಪುರ ಬಯೋಲೈನ್ ಲ್ಯಾಬೋರೇಟರಿ ಸಹಕಾರದೊಂದಿಗೆ ಸಾರ್ವಜನಿಕ ಆರೋಗ್ಯ ಉಚಿತ ತಪಾಸಣಾ ಶಿಬಿರ ಗಂಗೊಳ್ಳಿ ಕೊಸೆಸಾಂವ್ ಮಾತೆಯವರ ದೇವಾಲಯದ ಸಂತ ಜೋಸೆಫ್ ವಾಜ್ ಸಭಾಂಗಣದಲ್ಲಿ ಭಾನುವಾರ ಜರುಗಿತು.
ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಗಂಗೊಳ್ಳಿ ಅಧ್ಯಕ್ಷ ಎಡ್ವರ್ಡ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಚರ್ಚ್ ಧರ್ಮಗುರು ಹಾಗೂ ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ಥಾಮಸ್ ರೋಶನ್ ಡಿಸೋಜ, ಆರೋಗ್ಯ ಆಯೋಗ ಸಂಚಾಲಕಿ ಗ್ಲೋರಿಯಾ ಫರ್ನಾಂಡಿಸ್, ಗುರು ಜ್ಯೋತಿ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ವಿಜಯ್ ಖಾರ್ವಿ, ಸೋಶಿಯಲ್ ವೆಲ್ಫೇರ್ ಫೆಡರೇಶನ್ ಗಂಗೊಳ್ಳಿ ಅಧ್ಯಕ್ಷ ಅಬ್ದುಲ್ ರಶೀದ್, ಕುಂದಾಪುರ ಬಯೋಲಿನ್ ಲ್ಯಾಬೋರೇಟರಿ ಮ್ಯಾನೇಜಿಂಗ್ ಪಾರ್ಟ್ನರ್ ಸೋಮನಾಥ್, ಸ್ಟಾರ್ ಹೆಲ್ತ್ ಇನ್ಶೂರೆನ್ಸ್ನ ಸೀನಿಯರ್ ಮ್ಯಾನೇಜರ್ ಗುರುರಾಜ್ ಗೋತ್ವಾಲ್, ಕೆಥೊಲಿಕ್ ಸಭಾ ಗಂಗೊಳ್ಳಿಯ ಮಾರ್ಗದರ್ಶಕ ಆಲ್ವಿನ್ ಕ್ವಾಡ್ರಸ್, ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಕೇಂದ್ರೀಯ ಸಮಿತಿ ಪ್ರಥಮ ಅಧ್ಯಕ್ಷ ಎಲ್ರೊಯ್ ಕಿರಣ್ ಕ್ರಾಸ್ತಾ, ಕೆಥೊಲಿಕ್ ಸಭಾ ಕುಂದಾಪುರ ವಲಯ ಮಾಜಿ ಅಧ್ಯಕ್ಷ ಹೆರಿಕ್ ಗೊನ್ಸಾಲ್ವಿಸ್ ಮತ್ತು ಮೈಕಲ್ ಪಿಂಟೊ ಉಪಸ್ಥಿತರಿದ್ದರು.
ಎಡ್ವರ್ಡ್ ಫರ್ನಾಂಡಿಸ್ ಸ್ವಾಗತಿಸಿದರು. ಘಟಕ ಉಪಾಧ್ಯಕ್ಷ ವಿಲ್ಸನ್ ಡಯಾಸ್ ವಂದಿಸಿದರು. ಘಟಕ ನಿಯೋಜಿತ ಅಧ್ಯಕ್ಷ ಓವಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.