ಕಾಸರಗೋಡು: ಅದೂರು ಶ್ರೀ ಭಗವತಿ ದೇವಸ್ಥಾನದಲ್ಲಿ 2025 ಜನವರಿ 19ರಿಂದ 24ರವರೆಗೆ ನಡೆಯಲಿರುವ ಪೆರುಂ ಕಳಿಯಾಟ ಮಹೋತ್ಸವ ಅಂಗವಾಗಿ ಕಾಸರಗೋಡು ಸ್ಥಳೀಯ ಸಮಿತಿ ರಚನಾ ಸಭೆ ಕಾಸರಗೋಡು ನೆಲ್ಲಿಕುಂಜೆಯ ಲಲಿತಕಲಾ ಸದನದಲ್ಲಿ ಜರುಗಿತು.
ನಗರದ ಖ್ಯಾತ ವೈದ್ಯ ಡಾ.ಅನಂತ ಕಾಮತ್ ಸಮಾರಂಭ ಉದ್ಘಾಟಿಸಿದರು. ಖ್ಯಾತ ನೇತ್ರ ತಜ್ಞ ಡಾ.ಸುರೇಶ್ ಬಾಬು, ಕಳಿಯಾಟ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ವಿಪಿನ್‌ದಾಸ್ ರೈ ಅಧ್ಯಕ್ಷತೆ ವಹಿಸಿದ್ದರು. ವಿವಿಧ ದೈವಸ್ಥಾನಗಳ ಆಚಾರಕರ್ಮಿಗಳು, ಶ್ರೀ ವೆಂಕಟ್ರಮಣ ಹೊಳ್ಳ, ಡಾ.ಶ್ರೀರಾಜ್, ಜ್ಯೋತಿಷಿ ಸಿ.ವಿ.ಪುದುವಾಲ್, ಜನ್ನನ್ ಜೈಶಾಲ್, ಸಲಹೆಗಾರರಾದ ವೀಣಾ ಅರುಣ್‌ಕುಮಾರ್, ಉಮಾ ಎಂ., ಶ್ರೀಲತಾ ಟೀಚರ್, ಮಲ್ಲಿಕಾ ಪ್ರಭಾಕರನ್, ಉಪೇಂದ್ರನ್ ಕೋಟೆಕಣಿ, ಗುರುಪ್ರಸಾದ್ ಪ್ರಭು, ಉಮೇಶ ಕಾವುಗೋಳಿ ಕಡಪುರಂ ಉಪಸ್ಥಿತರಿದ್ದರು.
ಕಾಸರಗೋಡು ಸ್ಥಳೀಯ ಸಮಿತಿ ಅಧ್ಯಕ್ಷ-ವೆಂಕಟರಮಣ ಹೊಳ್ಳ, ಉಪಾಧ್ಯಕ್ಷರಾಗಿ ಕಮಲಾಕ್ಷನ್ ಕೆ.ಎನ್., ಉಪೇಂದ್ರನ್ ಕೋಟೆಕಣಿ, ಪ್ರಧಾನ ಕಾರ್ಯದರ್ಶಿ-ಪದ್ಮನಾಭನ್ ಜಿ., ಜತೆಕಾರ್ಯದರ್ಶಿಗಳಾಗಿ ಗುರುಪ್ರಸಾದ್ ಪ್ರಭು, ನಾಗೇಶ್ ಕೆ.ರವಿ ಕೇಸರಿ ಮತ್ತು ಕೋಶಾಧಿಕಾರಿ-ಪುರುಷೋತ್ತಮನ್ ಕೆ.ಹಾಗೂ 101 ಮಂದಿ ಸದಸ್ಯರ ಸಮಿತಿ ರಚಿಸಲಾಯಿತು. ಸ್ಥಾನೀಯ ಸಮಿತಿ ಕಾರ್ಯದರ್ಶಿ ಪದ್ಮನಾಭನ್ ವಂದಿಸಿದರು.