ಪರಸ್ಪರ ನಂಬಿಕೆ, ವಿಶ್ವಾಸದಿಂದ ವ್ಯಕ್ತಿತ್ವ ವಿಕಸನ

jci
Published on

ಬೈಂದೂರು: ಓದಲು ಒಂದು ಕ್ಷಣ ಬೇಕಾಗುತ್ತದೆ. ಯೋಚನೆ ಮಾಡಲು ಒಂದು ನಿಮಿಷ ಬೇಕಾಗುತ್ತದೆ. ತಿಳಿಯಲು ಒಂದು ದಿನ ಬೇಕಾಗುತ್ತದೆ. ಆದರೆ ಉಳಿಸಿಕೊಳ್ಳಲು ಪೂರ್ಣ ಜೀವನವೇ ಬೇಕಾಗುತ್ತದೆ ಅದೇ ವಿಶ್ವಾಸ. ಈ ನೆಲೆಯಲ್ಲಿ ಪರಸ್ಪರ ನಂಬಿಕೆ, ವಿಶ್ವಾಸದಿಂದ ಸಂಘಟನೆ ಮೂಲಕ ಯುವಜನರಲ್ಲಿ ವ್ಯಕ್ತಿತ್ವ ವಿಕಸನದ ಮೂಲಕ ಮಾನವೀಯ ಮೌಲ್ಯ ರೂಪಿಸಿ ಸಮಾಜ ಸೇವಾ ಕಾರ್ಯ ಮಾಡಬೇಕು ಎಂದು ಕೇರಳ ಕಾಸರಗೋಡಿನ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಮೇಲ್ವಿಚಾರಕಿ ರಾಜಯೋಗಿನಿ ಬಿ.ಕೆ.ವಿಜಯಲಕ್ಷ್ಮೀ ಹೇಳಿದರು.

ಬೈಂದೂರು ರೋಟರಿ ಸಮುದಾಯ ಭವನದಲ್ಲಿ ಬುಧವಾರ ಜೆಸಿಐ ಬೈಂದೂರು ಸಿಟಿ ಘಟಕದ ವರ್ಷದ ನೂತನ ಪದಾಧಿಕಾರಿಗಳ ಪದಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಿರ್ಗಮಿತ ಅಧ್ಯಕ್ಷೆ ಅನಿತಾ ಆರ್.ಕೆ., 2025ನೇ ಸಾಲಿನ ನೂತನ ಅಧ್ಯಕ್ಷ ರಾಜು ಕೆ.ಮೊಗವೀರ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ವಲಯಾಧ್ಯಕ್ಷ ಜೆಸಿಐ ಸೆನೆಟರ್ ಅಭಿಲಾಷ್ ಬಿ.ಎ., ವಲಯ ಉಪಾಧ್ಯಕ್ಷೆ ಅಶ್ವಿನಿ ಐತಾಳ್, ಜೆಸಿಐ ನಿರ್ಗಮನ ಕಾರ್ಯದರ್ಶಿ ಗಣೇಶ ಪೂಜಾರಿ, ಶಿರೂರು ಜೆಸಿಐ ಪೂರ್ವಾಧ್ಯಕ್ಷ ಶಿರೂರು ಪ್ರಸಾದ ಪ್ರಭು, ಲೇಡಿ ಜೆಸಿ ಅಧ್ಯಕ್ಷೆ ಕವಿತಾ ಎನ್.ಶೇಟ್, ಜೆಜೆಸಿ ಅಧ್ಯಕ್ಷ ಹರ್ಷಿತ್ ಎನ್.ಶೇಟ್ ಮೊದಲಾವರು ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ರಾಘವೇಂದ್ರ ಬಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net