

ವಿಜಯವಾಣಿ ಸುದ್ದಿಜಾಲ ಉಡುಪಿ
ಯಾವುದೇ ಆಡಂಬರ, ಸೋಗಿನ ಜೀವನ ನಡೆಸದೆ ಸರಳ, ಮೌಲ್ಯ ಹಾಗೂ ನಿಷ್ಠೆಯ ಬದುಕು ನಡೆಸಿದ್ದ ಕೋಟ ಡಾ.ಶಿವರಾಮ ಕಾರಂತ ಅವರ ಜೀವನಶೈಲಿ ಆದರ್ಶಮಯ. ಬದುಕು ತಿಳಿವಳಿಕೆಯ ಯಾತ್ರೆ. ಅನ್ಯಾಯದ ವಿರುದ್ಧ ಧ್ವನಿ ಎತ್ತಿದವರಲ್ಲಿ ಅವರೂ ಮೊದಲಿಗರು ಎಂದು ಶಿಕ್ಷಣ ತಜ್ಞ, ಡಾ.ಮಹಾಬಲೇಶ್ವರ್ ರಾವ್ ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಆಶ್ರಯದಲ್ಲಿ ಗುರುವಾರ ಕೋಟ ಡಾ.ಶಿವರಾಮ ಕಾರಂತರ ಕಾದಂಬರಿಗಳ ಅಧ್ಯಯನ ಶಿಬಿರ ಉದ್ಘಾಟಿಸಿ ವಾತನಾಡಿದರು.
ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ್ ಮಾತನಾಡಿದರು. ರುಕ್ಮಿಣಿ ಶೆಡ್ತಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಸಹ ಪ್ರಾಧ್ಯಾಪಕ ಡಾ.ಪ್ರಸಾದ್ ರಾವ್ ಉಪನ್ಯಾಸ ನೀಡಿದರು. ಡಾ.ಶಿವರಾಮ ಕಾರಂತ ಟ್ರಸ್ಟ್ ಸದಸ್ಯ ಕಾರ್ಯದರ್ಶಿ ಪೂರ್ಣಿವಾ, ಸತೀಶ್ ಕೊಡವೂರು, ಡಾ.ಭಾರತಿ ಮರವಂತೆ, ಶಿಕ್ಷಕರು ಉಪಸ್ಥಿತರಿದ್ದರು. ಕನ್ನಡ ವಿಭಾಗ ಮುಖ್ಯಸ್ಥೆ ರತ್ನವಾಲಾ ಸ್ವಾಗತಿಸಿದರು. ಉಪನ್ಯಾಸಕಿ ಶಾಲಿನಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಜಿ.ಎಂ. ಶರೀಫ್ ಹೂಡೆ ವಂದಿಸಿದರು.
ಇತ್ತೀಚಿನ ದಿನಗಳಲ್ಲಿ ಯುವಪೀಳಿಗೆಯ ಜೀವನಶೈಲಿಯು ಓದುವಿಕೆಯಿಂದ ಅಂತರ ಕಾಯ್ದುಕೊಳ್ಳುವಂತೆ ವಾಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಕಾರಂತರ ಜೀವನ, ಕಾದಂಬರಿಗಳ ಸ್ವರೂಪ ಹಾಗೂ ಮಹತ್ವ ತಿಳಿಸಿ ಓದಿನಲ್ಲಿ ಆಸಕ್ತಿ ಹೆಚ್ಚಿಸುವುದು ಶಿಬಿರದ ಉದ್ದೇಶ. ಡಾ.ಗಣನಾಥ ಶೆಟ್ಟಿ ಎಕ್ಕಾರು ಡಾ.ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ https://www.vijayavani.net/establishment-of-md-adhikari-youth-club https://www.vijayavani.net/the-new-road-has-a-lot-of-potholes