ಜ್ಞಾನಸುಧಾದಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

vyaktitva vikasana..
vyaktitva vikasana..
Published on

ಕಾರ್ಕಳ: ವ್ಯಕ್ತಿತ್ವ ನಮ್ಮ ನೈತಿಕತೆ ಮೇಲೆ ನಿಂತಿದೆ. ನಡೆ, ನುಡಿ, ನಡವಳಿಕೆಯಿಂದ ಚಾರಿತ್ರ್ಯ ನಿರ್ವಾಣ ಸಾಧ್ಯ. ನಮ್ಮಲ್ಲಿ ನಮಗೆ ನಂಬಿಕೆಯಿರಲಿ ಎಂದು ಜೆಸಿಐ ರಾಷ್ಟ್ರೀಯ ತರಬೇತು ದೀಪಕ್‌ರಾಜ್ ಹೇಳಿದರು.

ಜೆಸಿಐ ಕಾರ್ಕಳದ ಸಹಯೋಗದೊಂದಿಗೆ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ಹಾಗೂ ಎನ್‌ಎಸ್‌ಎಸ್ ಟಕ ವತಿಯಿಂದ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜೆಸಿಐ ಕಾರ್ಕಳ ಅಧ್ಯಕ್ಷೆ ಶ್ವೇತಾ ಎಸ್.ಜೈನ್, ಗ್ರೋತ್ ಮತ್ತು ಡೆವಲಪ್‌ಮೆಂಟ್ ರೆನ್ ಡೈರೆಕ್ಟರ್ ವ್ನಿೇಶ್, ಕಾರ್ಯದರ್ಶಿ ಸುಶ್ಮಿತಾ ರಾವ್, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ.ಕೊಡವೂರು, ಉಪಪ್ರಾಂಶುಪಾಲ ಶ್ರೀಸಾಹಿತ್ಯ, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು., ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಮಿತ್ರಾ ಹಾಗೂ ಎನ್‌ಎಸ್‌ಎಸ್ ಟಕಾಧಿಕಾರಿ ಶೈಲೇಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸಕಿ ಅನಿಶಾ ಶೆಟ್ಟಿ ನಿರೂಪಿಸಿ,ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net