ರಂಗಭೂಮಿಯಿಂದ ವ್ಯಕ್ತಿತ್ವ ನಿರ್ಮಾಣ: ರಾಜಾರಾಮ ಪೆರ್ಲ ಅಭಿಪ್ರಾಯ

Bdk_theatre
Published on

ಪೆರ್ಲ: ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ನಿರ್ಮಾಣದಲ್ಲಿ ರಂಗಭೂಮಿಯ ಪರಿಚಯ ಹೆಚ್ಚು ಪರಿಣಾಮಕಾರಿ. ಕಾಸರಗೋಡಿನ ರಂಗಭೂಮಿ ಚಟುವಟಿಕೆಗಳಲ್ಲಿ ರಂಗ ಚಿನ್ನಾರಿಯ ಕೊಡುಗೆ ಮಹತ್ತರವಾದುದು ಎಂದು ಕೇರಳ ರಾಜ್ಯ ಕಿರು ಕೈಗಾರಿಕಾ ನಿಗಮದ ಜಿಲ್ಲಾಧ್ಯಕ್ಷ ರಾಜಾರಾಮ ಪೆರ್ಲ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗ ಮತ್ತು ನಾಲಂದ ಚಾರಿಟೆಬಲ್ ಟ್ರಸ್ಟ್ ಸಹಕಾರದಲ್ಲಿ ಕಾಸರಗೋಡಿನ ರಂಗಚಿನ್ನಾರಿ ಬಳಗದಿಂದ ಕಾಲೇಜು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ನಾಲಂದ ಕಾಲೇಜಲ್ಲಿ ಆಯೋಜಿಸಲಾಗಿದ್ದ, ರಂಗ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಾಲಂದ ಕಾಲೇಜು ಪ್ರಾಂಶುಪಾಲ ಶಂಕರ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ, ನಾನು ಅಲ್ಲ, ನಾವು ಎಂಬುದನ್ನು ರಂಗ ಶಿಕ್ಷಣ ಕಲಿಸುತ್ತದೆ ಎಂದರು.

ರಂಗಚಿನ್ನಾರಿ ನಿರ್ದೇಶಕ ಕೋಳಾರು ಸತೀಶ್ಚಂದ್ರ ಭಂಡಾರಿ, ಡಾ.ಶ್ರೀಪತಿ ಕಜಂಪಾಡಿ, ನಾಲಂದ ಕಾಲೇಜು ಸಲಹಾ ಸಮಿತಿ ಸದಸ್ಯ ರಾಜಶೇಖರ ಉಪಸ್ಥಿತರಿದ್ದು ಶುಭಹಾರೈಸಿದರು. ವಿದ್ಯಾರ್ಥಿನಿ ನವ್ಯಶ್ರೀ ಸ್ವಾಗತಿಸಿದರು. ಹರ್ಷಿತಾ ವಂದಿಸಿದರು. ಪ್ರಾಧ್ಯಾಪಕಿ ದಿಶಾ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ದಿನಪೂರ್ತಿ ರಂಗಸಜ್ಜಿಕೆ, ರಂಗಾಭಿನಯ, ನಟನಾ ಕೌಶಲ, ವಾಕ್ಪಟುತ್ವ, ಪ್ರೇಕ್ಷಕ ನಿರ್ವಹಣೆ, ರಂಗಗೀತೆಗಳ ಆಳ-ಅಗಲದ ಬಗ್ಗೆ ಸಮಗ್ರ ತರಬೇತಿ ನಡೆಯಿತು. ಕಾಸರಗೋಡು ಚಿನ್ನಾ ಹಾಗೂ ಕೋಳಾರು ಸತೀಶ್ಚಂದ್ರ ಭಂಡಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net