ಸುಳ್ಯದಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಜಾಥಾ

Sul_Jatha
Published on

ಸುಳ್ಯ: ಸಂಚಾರ ನಿಯಮ ಪಾಲನೆ ಹಾಗೂ ವಾಹನ ಚಾಲಕರು, ಪ್ರಯಾಣಿಕರು, ಸಾರ್ವಜನಿಕರ ಸುರಕ್ಷತೆ ಅಂಗವಾಗಿ ನಡೆಸಲ್ಪಡುವ ರಸ್ತೆ ಸುರಕ್ಷತಾ ಸಪ್ತಾಹ ಸುಳ್ಯ ಪೊಲೀಸ್ ಇಲಾಖೆ ಹಾಗೂ ಭಾರತ್ ಸೌಟ್ಸ್-ಗೈಡ್ಸ್ ಸುಳ್ಯ ವಲಯ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಶುಕ್ರವಾರ ನಡೆಯಿತು.

ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಸುಳ್ಯ ಜ್ಯೋತಿ ವೃತ್ತದ ಬಳಿ ಸುಳ್ಯ ಠಾಣಾ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಚಾಲನೆ ನೀಡಿದರು. ಸುಳ್ಯ ರೋಟರಿ ಶಾಲೆ, ಸಂತ ಜೋಸೆಫ್ ಶಾಲೆ, ಸುಳ್ಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು. ಬಳಿಕ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಬಗ್ಗೆಯ ಜಾಗೃತಿ ಫಲಕ ಪ್ರದರ್ಶಿಸಿ ಗಾಂಧಿನಗರದವರೆಗೆ ಜಾಥಾ ನಡೆಸಿದರು. ಪಿಎಸ್‌ಐ ಸರಸ್ವತಿ, ಸೌಟ್ಸ್-ಗೈಡ್ಸ್ ಶಿಕ್ಷಕ ಎಂ.ಜೆ.ಶಶಿಧರ ಹಾಗೂ ಶಾಲಾ ಶಿಕ್ಷಕರು, ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net